ಧಾರವಾಡ: ಧಾರವಾಡದ ಅಂಜುಮನ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಗ್ಯಾಲಕ್ಸಿ ಸಹಯೋಗದೊಂದಿಗೆ ಮಹಿಳಾ ಸಬಲೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಲಯನ್ಸ್ ಕ್ಲಬ್ ಗ್ಯಾಲಕ್ಸಿ ಕಾರ್ಯದರ್ಶಿ ಡಾ.ಎಸ್.ವೈ.ಶೇಖ್ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳಾ ಉದ್ಯಮಿ ಜ್ಯೋತಿ ಹಿರೇಮಠ ಮಾತನಾಡಿ, ಮಹಿಳಾ ಸಬಲೀಕರಣ ಇಂದಿನ ಸಮಾಜದಲ್ಲಿ ಅತೀ ಅವಶ್ಯ ಎಂದರು.
ಮಹಿಳೆಯರ ಸಬಲೀಕರಣಕ್ಕೆ ಪುರುಷರ ಬೆಂಬಲ ಅವಶ್ಯವಾಗಿ ಬೇಕಾಗುತ್ತದೆ. ಇಂದು ಎಂಎನ್‌ಸಿ ಯಲ್ಲಿ ಹೆಚ್ಚು ಮಹಿಳೆಯರೇ ಇರುವುದು ಸಂತಸ ತಂದಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎನ್.ಎಂ.ಮಕಾಂದಾರ ಹೇಳಿದರು.
ಕಾರ್ಯಕ್ರಮದಲ್ಲಿ ಪೇಪರ್ ಬ್ಯಾಗ್ ಹೇಗೆ ಮಾಡಬೇಕೆಂದು ಪ್ರಾಯೋಗಿಕವಾಗಿ ಮಾಡಿ ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಆಸ್ಮಾ ಬಳ್ಳಾರಿ, ಡಾ.ಶಮಿನ್ ಕಲಬುರ್ಗಿ, ಲಯನ್ಸ್ ಕ್ಲಬ್ ಗ್ಯಾಲಕ್ಸಿ ಅಧ್ಯಕ್ಷ ಡಾ.ನಾಗರಾಜ ಗುದಗನವರ, ಡಾ.ಮನಗುತ್ತಿ, ನಾಗೇಂದ್ರ ಬೆಣಗಿ ಮತ್ತಿತರರು ಇದ್ದರು.
Kshetra Samachara
03/12/2021 07:53 pm