ಹುಬ್ಬಳ್ಳಿ: ನವೆಂಬರ್ 14 ಮಕ್ಕಳ ದಿನಾಚರಣೆ ಅಂದರೆ ನಮ್ಮ ವಿದ್ಯಾಸಂಸ್ಥೆಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಹಬ್ಬವೋ ಹಬ್ಬ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿರುವ ಆಕಾಶ ಇನಸ್ಟಿಟ್ಯೂಟ್ ನಲ್ಲಿ ಇಂದು ಅಭೂತಪೂರ್ವವಾಗಿ ಆಚರಣೆ ಮಾಡಲಾಯಿತು. ಅಲ್ಲದೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ಕೂಡ ನೀಡಲಾಯಿತು.
ಹೌದು.. ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಆಕಾಶ medical, IIT-JEE ಫೌಂಡೇಶನ್ ನಲ್ಲಿಂದು JEE- NEET ನಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡುವ ಮೂಲಕ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಯಿತು. ಇನ್ನೂ ಮಕ್ಕಳ ಸಾಧನೆಯನ್ನು ಕೊಂಡಾಡಿದ ಉಪನ್ಯಾಸಕ ವೃಂದವು ಮಕ್ಕಳಿಗೆ ಮತ್ತಷ್ಟು ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು. ಇನ್ನೂ ವಿಶೇಷ ಅಂದರೆ ಪ್ರತಿಯೊಬ್ಬ ಉಪನ್ಯಾಸಕರು ಕೂಡ ನೀವು ಏನೇ ಸಾಧನೆ ಮಾಡಿದರು ಅದು ದೇಶಕ್ಕಾಗಿ ಮಾಡಿ. ಅಲ್ಲದೇ ನಮ್ಮ ದೇಶದ ಶಕ್ತಿ ಸಾಮರ್ಥ್ಯ ನಮ್ಮ ದೇಶದ ಅಭಿವೃದ್ಧಿಗಾಗಿಯೇ ಮೀಸಲು ಇರಲಿ. ಹೊರ ದೇಶಗಳ ಅಭಿವೃದ್ಧಿ ನಮ್ಮ ವಿದ್ಯಾರ್ಥಿಗಳ ಶ್ರಮ ಬೇಡ ಎಂದು ಹೇಳುವ ಮೂಲಕ ಮಕ್ಕಳಲ್ಲಿ ಮತ್ತಷ್ಟು ರಾಷ್ಟ್ರೀಯತೆಯನ್ನು ಭದ್ರ ಪಡಿಸಿದರು.
ಅಲ್ಲದೇ 2021ರ ಸಾಲಿನಲ್ಲಿ JEE-NEET ನಲ್ಲಿ ಸಾಧನೆ ಮಾಡಿದ ಮಕ್ಕಳ ಪಾಲಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಮಕ್ಕಳ ಪುರಸ್ಕಾರದ ಸಂಭ್ರಮವನ್ನು ಅನುಭವಿಸಿದರು. ಅಲ್ಲದೇ ಆಕಾಶ ಇನಸ್ಟಿಟ್ಯೂಟ್ ಬಗ್ಗೆ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಇನಸ್ಟಿಟ್ಯೂಟ್ ಮುಖ್ಯಸ್ಥರು ಕೂಡ ಪಬ್ಲಿಕ್ ನೆಕ್ಸ್ಟ್ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಆಕಾಶ ಇನಸ್ಟಿಟ್ಯೂಟ್ ನಲ್ಲಿ ಇಂದು ನಿಜಕ್ಕೂ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಅಲ್ಲದೇ ಎಲ್ಲ ಸಿಬ್ಬಂದಿ ಕೂಡ ಆಚರಣೆಯನ್ನು ಅರ್ಥಪೂರ್ಣವಾಗಿ ಮಾಡುವಲ್ಲಿ ಭಾಗಿಯಾಗಿರುವುದು ನಿಜಕ್ಕೂ ವಿಶೇಷವಾಗಿದೆ.
Kshetra Samachara
14/11/2021 09:21 pm