ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಸಮಾಜಶಾಸ್ತ್ರ ಪ್ರಾಧ್ಯಾಪಕರ ಸಂಘದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ಕಾರ್ಯಾಗಾರ

ಧಾರವಾಡ: ಕನಾ೯ಟಕ ವಿಶ್ವವಿದ್ಯಾಲಯ ಕಾಲೇಜು ಸಮಾಜಶಾಸ್ತ್ರ ಪ್ರಾಧ್ಯಾಪಕರ ಸಂಘದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020, "ಸಮಾಜಶಾಸ್ತ್ರ ಪಠ್ಯಕ್ರಮ ರಚನೆ ಮತ್ತು ಘಟಕಾಂಶ" ಕುರಿತು ಒಂದು ದಿನದ ಕಾರ್ಯಾಗಾರವನ್ನು‌ ಧಾರವಾಡದ ಕರ್ನಾಟ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸ‌ಂಪನ್ಮೂಲ ವ್ಯಕ್ತಿಗಳಾದ ಕರ್ನಾಟಕ ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಜಯಶ್ರೀ ಎಸ್ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ,ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಸವಾಲಾಗಿದ್ದು,ಪ್ರಾಧ್ಯಾಪಕರ ಶಕ್ತಿ,ಸಾಮರ್ಥ್ಯವನ್ನು ಒರೆಗೆ ಹಚ್ಚುವಂತಹದ್ದಾಗಿದೆ.ಹಿಂದಿನ ಶಿಕ್ಷಣ ಪದ್ದತಿ ನೀಡಲಾಗದ್ದನ್ನು ಎನ್ ಇ ಪಿ ನೀಡಲಿದೆ.ಎನ್ ಇ ಪಿಯಲ್ಲಿ ಕ್ರಿಯಾಶೀಲ ಹಾಗೂ ಹೊಂದಾಣಿಕೆ ಲಕ್ಷಣಗಳಿದ್ದು,ಇದು ವಿದ್ಯಾರ್ಥಿ ಕೇಂದ್ರೀತ ಹಾಗೂ ಉದ್ಯೋಗಿಗಳನ್ನು ಸೃಷ್ಠಿಸದೇ ಉದ್ಯೋಗದಾತರನ್ನು

ಸೃಷ್ಠಿಸುವಂತಹದ್ದಾಗಿದೆ.ಸಮಾಜಶಾಸ್ತ್ರ ಪ್ರಾಧ್ಯಾಪಕರಿಂದು ಸಮಾಜಶಾಸ್ತ್ರಿಯ ಕನ್ನಡಕ ಧರಿಸುವ ಮೂಲಕ ಸಮಾಜಶಾಸ್ತ್ರದ ಭೋದನೆ ಮಾಡುವ ಅಗತ್ಯವನ್ನು ಅರಿಯ ಬೇಕು ಹಾಗೂ ಎನ್ ಇ ಪಿ ಕುರಿತು ಹಾಗೂ "ಸಮಾಜಶಾಸ್ತ್ರ ಪಠ್ಯಕ್ರಮ ರಚನೆ ಮತ್ತು ಘಟಕಾಂಶ" ಕುರಿತು

ಸುಧೀರ್ಘವಾದ ಮಾಹಿತಿ ನೀಡಿದರು.

ಪ್ರೊ. ಎ ಎ ಹಿರೇಮಠ, ಡಿ ಎಸ್ ಸಿ ಸಿ-1,ಡಾ.ಈರಣ್ಣ ಮುಳುಗುಂದ

ಡಿ ಎಸ್ ಸಿ ಸಿ-2,ಒಇಸಿ-1 ಹಾಗೂ

ಡಾ.ನಳಿನಿ‌ ಬೆಂಗೇರಿ ಎಸ್ ಇ ಸಿ ಕುರಿತು ಮಾಹಿತಿ ನೀಡಿದರು.ಡಾ.ನಳಿನಿ ಬೆಂಗೇರಿ ಅಧ್ಯಕ್ಷತೆ ವಹಿಸಿದ್ದರು. ಡಾ.ನಾಗೇಶ್ ವಾಯ್ ಎನ್ ಪ್ರಸ್ತಾವಿಕವಾಗಿ ಮಾತನಾಡಿದರು.

ಗೌರವಾಧ್ಯಕ್ಷರಾದ ಜಿ ಆರ್ ಸೂಳಿಭಾವಿ,ಪ್ರೊ ವಿ ಎನ್ ಜಮಖಂಡಿ,ಡಾ ಎನ್ ಬಿ ಸಂಗಳದ,ಜಿ ಟಿ ಭಟ್,ಎಂ ಎಂ ಬುಡಶೆಟ್ಟಿ,ವಾಯ್ ಐ ಚವ್ಹಾಣ,ಶ್ರೀಮತಿ ಸುಧಾ ಹಿರೇಮಠ,ಗಿರಿಜಾ ಕಡ್ಡಿಪುಡಿ,ಸಂತೋಷ ಕಾಟ್ಕೆ,ಮಲ್ಲಿಕಾರ್ಜುನ ಪುರದನಗೌಡರ ಉಪಸ್ಥಿತರಿದ್ದರು.

ಎಂ ಎಸ್

ಗಾಣಿಗೇರ ಸ್ವಾಗತಿಸಿ ಅತಿಥಿಗಳನ್ನು‌ ಪರಿಚಯಿಸಿದರು.ಗಾಯತ್ರಿ ರಾಮನಗೌಡರ ನಿರೂಪಿಸಿದರು.ಜಗದೀಶ್ ಎಂ ವಂದಿಸಿದರು.

Edited By : Nagesh Gaonkar
Kshetra Samachara

Kshetra Samachara

06/10/2021 05:06 pm

Cinque Terre

17.3 K

Cinque Terre

0

ಸಂಬಂಧಿತ ಸುದ್ದಿ