ಹುಬ್ಬಳ್ಳಿ: ಇತ್ತೀಚೆಗೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಪ್ರಾಧ್ಯಾಪಕ ಸಂಘದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಪ್ರಾಧ್ಯಾಪಕ ಸಂಘದ ಸ್ಥಾಪಕಾಧ್ಯಕ್ಷರಾಗಿ ಮಂಗಳೂರು ವಿಶ್ವವಿದ್ಯಾಲಯ ಹಿಂದಿ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಎಸ್.ಎ.ಮಂಜುನಾಥ್ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರಿನ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜು ಹಿಂದಿ ವಿಭಾಗ ಮುಖ್ಯಸರಾದ ಡಾ ವಿನಯ್ ಕುಮಾರ್ ಯಾದವ್ ರವರನ್ನು ಹಾಗೂ ಕೋಶಾಧ್ಯಕ್ಷರಾಗಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸರಾದ ಡಾ.ಪ್ರಭು ವಿ. ಉಪಾಸ ಅವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರಾಜ್ಯದಲ್ಲಿಯೇ ಮೊದಲ ಹಿಂದಿ ಪ್ರಾಧ್ಯಾಪಕರ ಸಂಘದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಇದಾಗಿದ್ದು, ಪ್ರಾಧ್ಯಾಪಕರ ಸಂಘದ ಕಾರ್ಯಕಾರಿಣಿ ಸಭೆಯನ್ನು ಕೋವಿಡ್-19 ಕಾರಣದಿಂದ ಆನ್ ಲೈನ್ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಕರ್ನಾಟಕ ರಾಜ್ಯದ 11 ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕರು ಭಾಗವಹಿಸಿದರು. ವಿಶ್ವವಿದ್ಯಾಲಯಗಳ ಕಾಲೇಜು ಹಿಂದಿ ಅಧ್ಯಾಪಕರ ಸಂಘದ ಪದಾಧಿಕಾರಿಗಳು ಸರ್ವಸಮ್ಮತಿಯಿಂದ ರಾಜ್ಯ ಮಟ್ಟದ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಅಧ್ಯಾಪಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಈ ಮೂಲಕ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಪ್ರಾಧ್ಯಾಪಕ ಸಂಘವು ಪೂರ್ಣ ಪ್ರಮಾಣದಲ್ಲಿ, ಅಸ್ತಿತ್ವಕ್ಕೆ ಬಂದಿತು.ಜೊತೆಗೆ ಉಪಾಧ್ಯಕ್ಷರುಗಳಾಗಿ ಬೆಳಗಾವಿಯ ಆರ್.ಪಿ.ಡಿ ಕಲಾ, ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ಕಾಲೇಜಿನ ಹಿಂದಿ ವಿಭಾಗ ಮುಖ್ಯರಾದ ಡಾ.ರಾಜೇಂದ್ರ ಪವಾರ್, ಬೆಂಗಳೂರು ಮಹಾಲಕ್ಷ್ಮಿ ಪುರಂನ, ಅರಬಿಂದೋ ಕಾಲೇಜಿನ ಹಿಂದಿ ವಿಭಾಗ ಮುಖಸ್ಥರಾದ ಡಾ.ಬಸವರಾಜು, ಬೆಂಗಳೂರಿನ ಕಲ್-ಅಮೀನ್ ಡಿಗ್ರಿ ಕಾಲೇಜಿನ ಹಿಂದಿ ವಿಭಾಗ ಮುಖ್ಯರಾದ ಡಾ.ಪಾಕರಾ ಖಾನಂ, ಶಿವಗ್ರದ ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸರಾದ ಪ್ರೊ.ಪದ್ಮನಾಭ, ಕರ್ಗಿ ಜಿಲ್ಲೆಯ ಆಳಂದದ ಎಚ್.ಕೆ.ಇ.ಎ.ವಿ.ಪಾಟೀಲ್ ಆರ್ಟ್ಸ್ ಸೈನ್ ಮತ್ತು ಕಾಮರ್ಸ್ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಜಿ.ಬರ್ಧಯವರುಗಳು ಆಯ್ಕೆಯಾದರು, ಜತೆ ಕಾರ್ಯದರ್ಶಿಗಳಾಗಿ ಧಾರವಾಡದ ಕಿಟೆಲ್ ಆರ್ಟ್ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥರಾದ ಡಾ.ಕವಿತಾ, ಹೊಸದುರ್ಗದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥರಾದ ಪ್ರೊ.ಈರಣ, ಜೆ., ಬೆಂಗಳೂರಿನ ಲೋಹಿತ್ ಅಕಾಡೆಮಿ ಕಾಲೇಜ್ ಆಫ್ ಕಾಮರ್ಸ್ ನ ಪ್ರಾಚಾರ್ಯರಾದ ಡಾ. ಪ್ರಿಯ ಚಂದ್ರಹಾಸ, ಕೊಪ್ಪಳದ ಗವಿಸಿದ್ದೇಶ್ವರ ಆರ್ಟ್ಸ್, ಸೈನ್ ಮತ್ತು ಕಾಮರ್ಸ್ ಕಾಲೇಜಿನ ಹಿಂದಿ ವಿಭಾಗ ಮುರಾದ ಡಾ. ದಯಾನಂದ ಸಾಲಂಕೆ, ಮೈಸೂರಿನ ಮಹಾರಾಜ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥರಾದ ಡಾ. ಗೋಪಾಲ್ ರವರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಮಂಜು ಭಾರ್ಗವಿಯವರು ಅವಿರೋಧವಾಗಿ ಆಯ್ಕೆಯಾದರು.
Kshetra Samachara
05/08/2021 12:24 pm