ಕುಂದಗೋಳ : ಪಟ್ಟಣದ ಹರಭಟ್ಟ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 34 ವರ್ಷ ಪ್ರಾಚಾರ್ಯರಾಗಿ ಬಡ್ತಿ ಪಡೆದು ಸೇವಾ ನಿವೃತ್ತಿ ಹೊಂದಿದ ಬಿ.ಎಮ್.ಮುಂದಿನಮನಿ ಇವರಿಗೆ ಹರಭಟ್ಟ್ ಪದವಿಪೂರ್ವ ಮಹಾವಿದ್ಯಾಲಯದ ವತಿಯಿಂದ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿ ಬಿಳ್ಕೋಡಲಾಯಿತು.
ಗುರುವಂದನಾ ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿ ಹಾಗೂ ಸಹ ಶಿಕ್ಷಕರು ಸಸಿಗೆ ನೀರೆರೆದು ಉದ್ಘಾಟಿಸಿದರೇ, ಇನ್ನೋರ್ವ ಶಿಕ್ಷಕ ದೇವೇಂದ್ರ ಸೋಳಂಕಿ ಹಾಗೂ ಪ್ರಕಾಶ್ ಹಾದಿಮನಿ ಯೋಗಾಸನ ಪ್ರದರ್ಶಿಸಿ ಮಕ್ಕಳಿಗೆ ಯೋಗ ಶಿಕ್ಷಣದ ಕುರಿತು ಅರಿವಿನ ಮೂಡಿಸಿ ಶಿಕ್ಷಕರಿಗೆ ವಿಶೇಷ ಗೌರವ ಸಲ್ಲಿಸಿದರು.
ಬಳಿಕ ಕಾಲೇಜು ಆಡಳಿತ ಮಂಡಳಿ ಪ್ರಾಚಾರ್ಯ ಬಿ.ಎಮ್.ಮುಂದಿನಮನಿ ಅವರನ್ನು ಸನ್ಮಾನಿಸಿ ಬಿಳ್ಕೋಟ್ಟು ಅವರ ಬೀಳ್ಕೋಡುಗೆ ದಿನದ ಅಂಗವಾಗಿ ಹರಭಟ್ಟ್ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ಕಾಲೇಜು ವೃತ್ತಿ ಜೀವನದ ಅನುಭವಗಳ ಕುರಿತು ಪ್ರಾಚಾರ್ಯ ಬಿ.ಎಮ್.ಮುಂದಿನಮನಿ ಮೆಚ್ಚುಗೆ ಮಾತುಗಳನ್ನಾಡಿದರು.
Kshetra Samachara
30/07/2021 06:30 pm