ಧಾರವಾಡ: ಕವಿವಿ ಆಡಳಿತ ಮಂಡಳಿಯು ತನ್ನ ವ್ಯಾಪ್ತಿಗೆ ಬರುವ ಎಲ್ಲ ಪದವಿ ಕಾಲೇಜುಗಳಲ್ಲಿ ನಡೆಸಲು ಉದ್ದೇಶಿಸಿರುವ 1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷಾ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಪರೀಕ್ಷೆಗಳು ಮಾರ್ಚ ತಿಂಗಳಲ್ಲಿ ನಡೆಯಬೇಕಿತ್ತು. ವಿವಿಧ ಕಾರಣಗಳಿಂದ ಪರೀಕ್ಷೆಗಳನ್ನು ಮುಂದೂಡುತ್ತ ಬರಲಾಗಿದೆ. ಈಗ ಏಕಾಏಕಿ ಆಗಸ್ಟ್ 7 ರಂದು ಪಠ್ಯಕ್ರಮ ಬೋಧನೆ ಪೂರ್ಣಗೊಳಿಸಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಯುಜಿಸಿಯು ಕೊರೊನಾ ಸಂದರ್ಭದಲ್ಲಿ ಸದ್ಯ ಕೊನೆಯ ವರ್ಷದ ಸೆಮಿಸ್ಟರ್ ಪರೀಕ್ಷೆಗಳನ್ನು ಮಾತ್ರ ನಡೆಸಬೇಕು ಉಳಿದ ಸೆಮಿಸ್ಟರ್‌ಗೆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ನೀಡಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕು ಎಂದಿದೆ. ಆದರೆ, ಕವಿವಿ ಆಡಳಿತ ಮಂಡಳಿಯು ಈಗ ಬಹು ಆಯ್ಕೆ ಪ್ರಶ್ನೆಗಳನ್ನೂ ರದ್ದು ಮಾಡಿ ಆಗಸ್ಟ್ 16 ರಿಂದ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಸೆ.16 ರಿಂದ 6 ನೇ ಸೆಮಿಸ್ಟರ್‌ಗೆ ವಿವರಣಾತ್ಮಕ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಕೂಡಲೇ ಕವಿವಿ ಆಡಳಿತ ಮಂಡಳಿಯು ಈ ಕ್ರಮ ಕೈ ಬಿಟ್ಟು ಕೇವಲ ಅಂತಿಮ ವರ್ಷದ ಸೆಮಿಸ್ಟರ್ ಪರೀಕ್ಷೆಯನ್ನು ಮಾತ್ರ ನಡೆಸಬೇಕು. 1,3 ಹಾಗೂ 5 ನೇ ಸೆಮಿಸ್ಟರ್ ಪರೀಕ್ಷೆಗಳಿಂದ ಬಡ್ತಿ ನೀಡಬೇಕು. ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್ ಹೊರತುಪಡಿಸಿ ಇನ್ನುಳಿದ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳಿಂದ ಬಡ್ತಿ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
Kshetra Samachara
29/07/2021 04:39 pm