ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಅನಿರೀಕ್ಷಿತ ಶಾಲೆಗಳಿಗೆ ಭೇಟಿ:ವಿದ್ಯಾಗಮ ಪರಿಶೀಲನೆ

ಕಲಘಟಗಿ:ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಅನಿರೀಕ್ಷಿತವಾಗಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾಗಮ ಪರಿಶೀಲನೆ ಮಾಡಿದರು.

ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೆ.ಪಿ,ಸರಕಾರಿ ಪ್ರೌಢ ಶಾಲೆ ದೇವಿಕೊಪ್ಪ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಂಗನಹಳ್ಳಿ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಡೆಗೇರಿ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಶಾಲೆಗಳಿಗೆ ಭೇಟಿ‌ ನೀಡಿ ಸುರಕ್ಷತಾ ಕ್ರಮಗಳನ್ನು, ಕಲಿಕಾ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿ,ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ ಕಲಿಕಾ ದಿನಗಳು ಕಡಿಮೆ ಪ್ರಮಾಣದಲ್ಲಿ ದೊರೆತಿದ್ದು,ಧೈರ್ಯದಿಂದ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಾಧಿಕಾರಿ ಕುಮಾರ್ ಕೆ.ಎಫ್,ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ,ವೀಣಾ ಪಾಟೀಲ,ಬಿ ಆರ್ ಪಿ ಬಸವರಾಜ ಕುಂಬಾರ,ಎಸ್‌ಎನ್ ಮರಿಯಪ್ಪಗೌಡರ,ಮಹೇಶ ಧೂಳಿಕೊಪ್ಪ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

16/01/2021 02:23 pm

Cinque Terre

21.62 K

Cinque Terre

1

ಸಂಬಂಧಿತ ಸುದ್ದಿ