ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯಾರ್ಥಿನಿಗೆ ಲೆನೊವೊ ಟ್ಯಾಬ್ ನೀಡಿದ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ

ನವಲಗುಂದ : ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ 2020-21 ನೇ ಸಾಲಿನಲ್ಲಿ ಆನ್ ಲೈನ್ ಮೂಲಕ ವಿಜ್ಞಾನ ವಿಷಯದ ಚಟುವಟಿಕೆಗಳನ್ನು ನಡೆಸಿದ್ದು, ಈ ಚಟುವಟಿಕೆಯಲ್ಲಿ ನವಲಗುಂದದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಪವಿತ್ರ ಬ್ಯಾಲ್ಯಾಳಳಿಗೆ ಮಂಗಳವಾರ ಲೆನೊವೊ ಟ್ಯಾಬ್ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಇನ್ನು ವಸತಿ ನಿಲಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರಿಗೆ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಮೂಲಕ ಉಚಿತ ಮಾಸ್ಕ್ ಗಳನ್ನು ಸಹ ನೀಡಲಾಯಿತು. ಈ ಸಂಧರ್ಭದಲ್ಲಿ ಪ್ರತಿಷ್ಠಾನದ ಮಾರ್ಗದರ್ಶಕರಾದ ಮಂಜುನಾಥ ಮಡಿವಾಳರ, ಪ್ರಾಂಶುಪಾಲರಾದ ಆನಂದ ಹಿರೇಲಿಂಗಪ್ಪನವರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

05/01/2021 09:08 pm

Cinque Terre

12.84 K

Cinque Terre

2

ಸಂಬಂಧಿತ ಸುದ್ದಿ