ಧಾರವಾಡ: ಸುಮಾರು ಒಂದು ವರ್ಷಕ್ಕಿಂತಲೂ ಅಧಿಕ ಕಾಲ ಪ್ರಭಾರ ಕುಲಪತಿಗಳ ಮೇಲೆ ಮುನ್ನಡೆಯುತ್ತಿದ್ದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸರ್ಕಾರ ಇದೀಗ ಕಾಯಂ ಕುಲಪತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾಗಿದ್ದ ಡಾ.ಕೆ.ಬಿ.ಗುಡಸಿ ಅವರನ್ನು ಕವಿವಿಯ ನೂತನ ಕುಲಪತಿಯನ್ನಾಗಿ ಸರ್ಕಾರ ನೇಮಕ ಮಾಡಿದೆ. ಕಳೆದ ಒಂದು ವರ್ಷಕ್ಕಿಂತಲೂ ಅಧಿಕ ದಿನಗಳವರೆಗೆ ವಿವಿಗೆ ಕಾಯಂ ಕುಲಪತಿಯೇ ನೇಮಕವಾಗಿರಲಿಲ್ಲ. ಈ ಅವಧಿಯಲ್ಲಿ ನಾಲ್ಕೈದು ಜನ ಪ್ರಭಾರ ಕುಲಪತಿಗಳಾಗಿ ಕಾರ್ಯ ಮಾಡಿದ್ದರು.
Kshetra Samachara
26/09/2020 05:55 pm