ಕುಂದಗೋಳ: ಮಕ್ಕಳ ಅಭಿವೃದ್ಧಿ ದೃಷ್ಟಿಕೋನದಿಂದ ಸರ್ಕಾರಿ ಶಾಲೆಗಳ ಪ್ರಗತಿ ಆಗ್ತಾ ಇದೆ. ಎಲ್ಲ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಕಲಿಯಬೇಕು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಕುಂದಗೋಳ ತಾಲೂಕಿನ ಇಂಗಳಗಿ ಹಾಗೂ ಹಿರೇಬೂದಿಹಾಳ ಗ್ರಾಮದ ಸರ್ಕಾರಿ ಶಾಲೆಗಳ ನೂತನ ಕೊಠಡಿ ಉದ್ಘಾಟನೆ ಮಾಡಿ ಮಾತನಾಡಿ ನಮ್ಮೂರ ಮಕ್ಕಳ ಕಲಿಕಾ ಪ್ರಗತಿ ನಿಟ್ಟಿನಲ್ಲಿ ಶಾಲೆ ಕಟ್ಟಡದ ಒಂದೊಂದೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.
ಬಳಿಕ ಸರ್ಕಾರಿ ಶಾಲೆ ನೂತನ ಕಟ್ಟಡ ನಿರ್ಮಾಣ ವೀಕ್ಷಿಸಿದ ಅವರು ಶಾಲಾ ಶಿಕ್ಷಕರಿಂದ ಸನ್ಮಾನಕ್ಕೆ ಭಾಜನರಾದರು. ಬಳಿಕ ಸಂಶಿ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಚೀಟಿ ಎತ್ತುವ ಮೂಲಕ ಫಲಾನುಭವಿಗಳಿಗೆ ತಾಡಪತ್ರಿ ವಿತರಿಸಿ ಸ್ಥಳೀಯ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ವೀಕ್ಷಣೆ ಮಾಡಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸ್ಥಳೀಯರಿಗೆ ತಿಳಿಸಿದರು.
ಶಾಲಾ ಕೊಠಡಿ ಉದ್ಘಾಟನೆ ಸಂದರ್ಭದಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣನವರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮೇಶ್ ಹೆಬಸೂರು ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
18/07/2022 03:53 pm