ಕುಂದಗೋಳ : ಅಬ್ಬಾ ! ರಜೆಯ ಮಜವನ್ನು ಆನಂದಿಸಿ ಬೇಸಿಗೆ ರಜೆ ಕಳೆದು ಇಂದು ಶಾಲೆ ಕಡೆ ಹೆಜ್ಜೆ ಹಾಕಿದ ಮಕ್ಕಳನ್ನು ಇಲ್ಲೊಂದು ಶಾಲೆಯ ಶಿಕ್ಷಕರು ಅತಿ ಉತ್ಸಾಹದಿಂದ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.
ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಜ್ಞಾನಧಾರಾ ಶಾಲೆಯ ಶಿಕ್ಷಕರು ಶಾಲಾ ಮಕ್ಕಳಿಗೆ ಬಣ್ಣದ ಪೇಪರ್‌ನ ಕಿರೀಟ ತೊಡಿಸಿ, ಗುಲಾಬಿ ಹೂ ನೀಡಿ, ಆರತಿ ಎತ್ತಿ ಕುಂಕುಮ ಹಚ್ಚಿ ವೆಲ್ ಕಮ್ ಎಂಬ ನಾಮಫಲಕ ಹಿಡಿದು ಒಬ್ಬೊಬ್ಬ ಮಕ್ಕಳ ಆ ನಾಮಫಲಕ ಮೂಲಕ ಶಾಲೆಗೆ ಬರಮಾಡಿಕೊಂಡಿದ್ದಾರೆ. ಹಾಗೂ ಬಂದ ಎಲ್ಲ ಮಕ್ಕಳಿಗೂ ಸಿಹಿ ಚಾಕೊಲೇಟ್ ನೀಡಿ ಮಕ್ಕಳಲ್ಲಿ ಸಂತೋಷದ ಅಲೆ ಚಿಮ್ಮಿಸಿ ಖುಷಿಪಡಿಸಿದ್ದಾರೆ.
ಅದರಂತೆ ಶಾಲೆ ಕೊಠಡಿಗಳನ್ನು ಸಹ ಅಷ್ಟೇ ಅಚ್ಚುಕಟ್ಟಾಗಿ ಬಲೂನ್‌ಗಳಿಂದ ಅಲಂಕಾರ ಮಾಡಿದ ಶಿಕ್ಷಕಿಯರು ಮಕ್ಕಳನ್ನು ಶಾಲೆಗೆ ಕರೆತರುವ ದಿನವನ್ನು ಹಬ್ಬದ ವಾತಾವರಣನ್ನಾಗಿ ಸಂಭ್ರಮಿಸಿದ್ದಾರೆ. ಇತ್ತ ಪಾಲಕರು ಸಹ ಮಕ್ಕಳು ಸಂಭ್ರಮದಿಂದ ಶಾಲೆಗೆ ತೆರಳುವುದನ್ನು ನೋಡಿ ಹೆಮ್ಮೆ ಪಟ್ಟಿದ್ದಾರೆ.
Kshetra Samachara
16/05/2022 03:07 pm