ನವಲಗುಂದ : ಕೆರೊನ್ ಭಯದ ವಾತಾವರಣ ಮಧ್ಯ ತಾಲೂಕಿನ ಅಳಗವಾಡಿ ಗ್ರಾಮದ ಸರಕಾರಿ ಮಾದರಿ ಕೇಂದ್ರ ಶಾಲೆ ಪ್ರಗತಿಪಥದತ್ತ ಮುಖ್ಯೋಪಾಧ್ಯಾಯರಾದ ವಿ. ಆರ್. ಲಕ್ಕಣ್ಣವರ ಅವರ ನೇತೃತ್ವದಲ್ಲಿ ಎಲ್ಲಾ ಸಿಬ್ಬಂದಿ ವರ್ಗವು ಹಾಗೂ ಯುವ ಉತ್ಸಾಹಿ ಎಸ್ ಡಿಎಂಸಿ ಅಧ್ಯಕ್ಷರಾದ ಮಾಕನ್ನವರ ಜೊತೆಗೂಡಿ ಶಾಲೆಯ ಎಲ್ಲಾ ಕೊಠಡಿಗಳ ದುರಸ್ತಿ ಕಾರ್ಯ ಹಾಗೂ ಸುಣ್ಣಬಣ್ಣ ಅಂದಚಂದ ಜೊತೆಗೆ ಮುಖ್ಯದ್ವಾರದ ಶೃಂಗಾರ ಹಾಗೂ ಗ್ರಾಮ ಪಂಚಾಯಿತಿ ನೆರವಿನೊಂದಿಗೆ ಶಾಲೆಯ ರಕ್ಷಣಾ ಗೋಡೆ ನಿರ್ಮಾಣ ಕಾರ್ಯವು ಭರದಿಂದ ಸಾಗಿದೆ.
ಈ ಎಲ್ಲಾ ಕಾರ್ಯಚಟುವಟಿಕೆಗಳ ಕ್ರಿಯಾಶೀಲತೆಯ ಜೊತೆಗೆ ಎಲ್ಲಾ ಗುರುಗಳು ಗುರು ಮಾತೆಯರು ವಿನೂತನ ಕಾರ್ಯಕ್ರಮಗಳಾದ ವಿದ್ಯಾ ಗಮ ಹಾಗೂ ನನ್ನ ಕನಸಿನ ಶಾಲೆಯ ಪಠ್ಯ ಹಾಗೂ ಪಠ್ಯೇತರ ಕಲಿಕಾಂಶ ಮತ್ತು ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸುವುದರ ಜೊತೆಗೆ ಮಕ್ಕಳೊಂದಿಗೆ ನಿರಂತರವಾಗಿ ಶೈಕ್ಷಣಿಕ ಸಂಪರ್ಕವನ್ನು ಹೊಂದಿದ್ದು ತುಂಬಾ ಮೆಚ್ಚುಗೆಯಾಗಿದೆ. ಇದರೊಂದಿಗೆ ವಿದ್ಯಾ ಗಮ ಕಾರ್ಯಕ್ರಮದ ನಿಯಮಗಳನ್ವಯ ನಿಗದಿಗೊಳಿಸಿದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
Kshetra Samachara
19/09/2020 12:29 pm