ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಿಲ್ಲರ್ ಕೊರೋನಾದಿಂದ ಅನಾಥರಾದ ಮಕ್ಕಳು: ಶಾಲೆಯ ಮುಖವನ್ನೇ ನೋಡಿಲ್ಲ...!

ಹುಬ್ಬಳ್ಳಿ: ಕೊರೋನಾ ಹಾವಳಿಯಿಂದ ಅದೆಷ್ಟೋ ಜನರು ಕೆಲಸವನ್ನು ಕಳೆದುಕೊಂಡಿದ್ದಾರೆ. ಕಳೆದುಕೊಂಡ ಕೆಲಸವನ್ನು ಮತ್ತೆ ಪಡೆದುಕೊಳ್ಳಬಹುದು ಆದರೆ ಅದೆಷ್ಟೋ ಮಕ್ಕಳು ತಮ್ಮ ತಂದೆ ತಾಯಿಯನ್ನು ಕಳೆದುಕೊಂಡ ಅನಾಥರಾಗಿದ್ದಾರೆ. ಅಯ್ಯೋ ದುರ್ವಿಧಿಯೇ ನಿನೆಷ್ಟು ಕ್ರೂರಿ...

ಕೊರೋನಾ ನಂತರ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಆರಂಭವಾಗಿವೆ. ಎಲ್ಲ ಮಕ್ಕಳಿಗೆ ಕೋವಿಡ್ ಬಳಿಕ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಕಾರಣಕ್ಕೆ ಸರ್ಕಾರ ಸಹ ಎಲ್ಲ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ಕೋವಿಡ್ ನಂತರ ಶಾಲೆಗೆ ಮಕ್ಕಳು ಮಾತ್ರ ಹಾಜರಾಗುತ್ತಿಲ್ಲ.. ಶಾಲೆಯಿಂದ ಮಕ್ಕಳು ಹೊರಗಡೆ ಉಳಿಯುವುದಕ್ಕೆ ಕಾರಣಗಳೇ ಬಹಳ ನೋವು ತರಿಸುವಂತಿದೆ.

ಕೋವಿಡ್ ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೆಲ ಕುಟುಂಬಗಳಿಗೆ ಮಕ್ಕಳ ದುಡಿಮೆಯೇ ಜೀವನಾಧಾರವಾಗಿದೆ. ಕೆಲ ಮಕ್ಕಳು ಶಾಲೆಯನ್ನೇ ಮರೆತುಬಿಟ್ಟಿದ್ದಾರೆ. ಮಕ್ಕಳು ಹಾಗೂ ಪಾಲಕರ ನಿರಾಸಕ್ತಿಯೂ ಶಾಲೆಯಿಂದ ಹೊರಗುಳಿಯಲು ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. 6ರಿಂದ 10ನೇ ತರಗತಿಯವರೆಗೆ ಸದ್ಯ ಶಾಲೆ ಆರಂಭವಾಗಿದ್ದರೂ ಶೇ. 50ರಷ್ಟು ಮಾತ್ರ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಸರಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳೂ ಸರಿಯಾಗಿ ಶಾಲೆಗೆ ತೆರಳುತ್ತಿಲ್ಲ. ಇನ್ನೂ ನೋವಿನ ಸಂಗತಿ ಎಂದರೇ ತಂದೆ ತಾಯಿ ಇಲ್ಲದೆ 186 ಮಕ್ಕಳು ಶಾಲೆಗೆ ಹೋಗದ ಸ್ಥಿತಿ ತಲುಪಿದ್ದಾರೆ.

ಅಕ್ಟೋಬರ್ 21ರಿಂದ ಪ್ರಾಥಮಿಕ ಶಾಲೆಗಳು ಆರಂಭವಾಗಿವೆ. ಆದರೆ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಜರಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಮಕ್ಕಳು ಶಾಲೆಯಿಂದ ಹೊರಗೆ ಉಳಿಯದಂತೆ ಸರ್ಕಾರದ ಹಲವು ಯೋಜನೆಗಳನ್ನು ರೂಪಿಸಿದೆ. ರೇಡಿಯೋ, ದೂರದರ್ಶನದ ಸಂವೇದ ಕಾರ್ಯಕ್ರಮ, ಯೂಟ್ಯೂಬ್ ಚಾನೆಲ್, ದೀಕ್ಷಾ ಪೋರ್ಟಲ್-ಜ್ಞಾನದೀಪ ಹಾಗೂ ಆನ್ಲೈನ್ ತರಗತಿಗಳನ್ನು ನಡೆಸಿ ಪಾಠ ಮಾಡಲಾಗಿದೆ.,ಇದನ್ನ ಹೊರತುಪಡಿಸಿ ಮಕ್ಕಳ ಪೋಷಕರು ಕೋವಿಡ್ ನಿಂದ ಮೃತವಾಗಿದ್ದ ಕಾರಣಕ್ಕೂ ಶಾಲೆಗೆ ಮರಳಲು ಮಕ್ಕಳು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

Edited By : Shivu K
Kshetra Samachara

Kshetra Samachara

27/11/2021 04:28 pm

Cinque Terre

45.83 K

Cinque Terre

1

ಸಂಬಂಧಿತ ಸುದ್ದಿ