ಧಾರವಾಡ : ಶಿಕ್ಷಣ ಸಚಿವರ ನಡೆಯ ವಿರುದ್ಧ ಖಾಸಗಿ ಶಾಲಾ ಅಭಿವೃದ್ಧಿ ಸಂಸ್ಥೆಯ ಅಸಮಾಧಾನ ವ್ಯಕ್ತಪಡಿಸಿದ್ದು,ಡಿಸೆಂಬರ್ 2ಕ್ಕೆ ಪ್ರತಿಭಟನೆ ನಡೆಸಲು ಖಾಸಗಿ ಶಾಲೆಗಳಿಂದ ಪ್ರತಿಭಟನೆ ಕರೆ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಖಾಸಗಿ ಶಾಲೆಗಳಿಂದ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಎದರು ಪ್ರತಿಭಟನೆಗೆ ನಿರ್ಧಾರಿಸಲಾಗಿದೆ ಎಂದು ಅನುದಾನ ರಹಿತ ಖಾಸಗಿ ಶಾಲಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದವರು,ಅನುದಾನ ರಹಿತ ಶಾಲಾ ಸಂಸ್ಥೆಗಳಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಲು ಕರೆ ನೀಡಲಾಗಿದೆ
ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಾರೆ.ಇದರಿಂದ ಮಕ್ಕಳು, ಪೋಷಕರ ನಡುವೆ ಗೊಂದಲ ಸೃಷ್ಟಿಯಾಗುತ್ತಿದೆ.ಸರಿಯಾದ ರೀತಿಯೊಳಗೆ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಖಾಸಗಿ, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಣವನ್ನೇ ನೀಡುತ್ತಿದ್ದೇವೆ.ಸರ್ಕಾರಿ ಶಾಲೆಗಳಗಿಂತ ಖಾಸಗಿ ಶಾಲೆಗಳಲ್ಲಿ ಮಕ್ಕಳು ಹೆಚ್ಚು ಓದುತ್ತಿದ್ದಾರೆ.ಖಾಸಗಿ ಶಾಲೆಗಳಿಗೆ ಬರುವ ಮಕ್ಕಳಿಗೆ ಶುಲ್ಕ ತೆಗೆದುಕೊಳ್ಳಬೇಡಿ ಎಂದು ಹೇಳ್ತಾರೆ.ಶಿಕ್ಷಕರಿಗೆ ಸಂಬಳ ನೀಡಬೇಕೆಂದು ಆದೇಶ ಹೊರಡಿಸುತ್ತಾರೆ.ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಜಿಲ್ಲಾ ಶಾಲೆಗಳನ್ನು ಸಮೀಕರಣ ಮಾಡುವುದು ಸರಿಯಲ್ಲ,ಧಾರವಾಡದಲ್ಲಿ 60, ಉತ್ತರ ಕರ್ನಾಟಕ ಭಾಗದಲ್ಲಿ 2000 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿವೆ,ಸಚಿವರು ಕೂಡಲೇ ಇಡೀ ಕರ್ನಾಟಕದ ಅನುದಾನ ರಹಿತ ಶಾಲಾ ಶಿಕ್ಷಕರ ಕರೆಯಿಸಿ ಸಭೆ ಮಾಡಬೇಕು.ಕೂಡಲೇ ತನ್ನ ನಿಲುವುಗಳನ್ನು ಬದಲಾಯಿಸಬೇಕು ಎಂದು ಅವರು ಹೇಳಿದರು.
Kshetra Samachara
27/11/2020 05:58 pm