ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪರೀಕ್ಷಾ ಕೇಂದ್ರದ ಮೇಲೆ ಹೆಜ್ಜೇನು ದಾಳಿ

ಹುಬ್ಬಳ್ಳಿ: ಇನ್ನೇನು ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಆರಂಭವಾಗಬೇಕಿತ್ತು. ಈ ವೇಳೆಗೆ ಹೆಜ್ಜೇನುಗಳು ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿಗಳು ಪರೀಕ್ಷೆ ಬಿಟ್ಟು ಪೋಷಕರ ಜೊತೆಗೆ ಓಡಿ ಪರೀಕ್ಷಾ ಕೇಂದ್ರದಿಂದ ಹೊರಟು ಹೋದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದಿದೆ.

ಕೇಶ್ವಾಪುರದ ಸೇಂಟ್ ಮೈಕಲ್ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಮೇಲೆ ಹೆಜ್ಜೇನು ದಾಳಿ ಆಗಿದೆ. ಇನ್ನೇನು ಗಣಿತ ಪರೀಕ್ಷೆ ಬರೆಯಬೇಕು ಅಂತ ತಯಾರಾಗಿ ಬಂದಿದ್ದ ವಿದ್ಯಾರ್ಥಿಗಳು ಒಮ್ಮೆಲೇ ಚದುರಿ ಹೋಗಿದ್ದಾರೆ. ಹೆಜ್ಜೇನು ಶಾಲೆಯ ಆವರಣದಲ್ಲಿದ್ದ ಎಲ್ಲರ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲಿದ್ದ ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವು ವಿದ್ಯಾರ್ಥಿಗಳು, ಪೋಷಕರು ಹೆಜ್ಜೇನು ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಹೀಗೆ ಮುಖದ ಮೇಲೆಲ್ಲಾ ದಾಳಿಯ ಕಲೆಗಳು. ದಾಳಿಯ ಗಂಭೀರತೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು. ಇತ್ತ ಹೆಜ್ಜೆನು ದಾಳಿಯಿಂದ ತಪ್ಪಿಸಿಕೊಳ್ಳಲು ಮೈಮೇಲೆ ಬೆಡ್ ಶೀಟ್ ಹೊತ್ತುಕೊಂಡು ರಕ್ಷಣೆ ಪಡೆಯುತ್ತಿರುವ ಪೊಲೀಸರು.

ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಬರೆಯಬೇಕಿದ್ದ ಈ ವಿದ್ಯಾರ್ಥಿಗಳು ಇದೀಗ ಕಿಡಿಗೇಡಿಗಳ ಚೇಷ್ಠೆಗೆ ನೋವು ಅನುಭವಿಸುವಂತಾಗಿದೆ.

ಪೋಷಕರಾದ ರಾಜೇಶ್ವರಿ ಎನ್ನುವವರೂ ತೀವ್ರವಾಗಿ ದಾಳಿಗೊಳಗಾಗಿದ್ದಾರೆ. ಮೈ ಕೈ ಸೇರಿದಂತೆ ಮುಖಕ್ಕೆಲ್ಲ ಜೇನು ಹುಳುಗಳು ದಾಳಿ ಮಾಡಿದ್ದು, ಅವರಿಗೆ ಸದ್ಯ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹೆಜ್ಜೇನು ದಾಳಿ ಮಾಡುತ್ತಲೇ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಕ್ಕಳನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರವಾಹಿಸಿದ್ದಾರೆ. ದಾಳಿಗೊಳಗಾದ ಮಕ್ಕಳನ್ನು ರಕ್ಷಣೆ ಮಾಡಿ ಎಲ್ಲರನ್ನೂ ಹೊರತಂದು ತಮ್ಮ ಕರ್ತವ್ಯ ಮೆರೆದಿದ್ದಾರೆ. ನಂತರ ಪ್ರಾಥಮಿಕ ಚಿಕಿತ್ಸೆ ಪಡೆದು ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಲಾಗಿದೆ ಅಂತ ಬಿಇಓ ಹೇಳಿದ್ದಾರೆ.

ನೆಮ್ಮದಿಯಿಂದ ಪರೀಕ್ಷೆ ಬರೆಯಬೇಕು ಅಂತ ಬಂದಿದ್ದ ವಿದ್ಯಾರ್ಥಿಗಳು ಜೇನು ಹುಳುವಿನ ದಾಳಿಗೆ ಸಿಲುಕಿ ಕೊನೆಗೂ ಪರೀಕ್ಷೆ ಬರೆದಿದ್ದು ಕೆಲ ಗೊಂದಲಕ್ಕೆ ಕಾರಣವಾಯಿತು. ಸದ್ಯ ದಾಳಿಗೊಳಗಾದ 3 ಜನರಿಗೆ ಚಿಕಿತ್ಸೆ ಮುಂದುವರೆದಿದ್ದು ಎಲ್ಲರೂ ಚೇತರಿಸಿಕೊಂಡಿದ್ದಾರೆ ಅನ್ನೋದೇ ಸಮಾಧಾನಕರ ವಿಷಯ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

04/04/2022 05:34 pm

Cinque Terre

79.15 K

Cinque Terre

6

ಸಂಬಂಧಿತ ಸುದ್ದಿ