01
ಹುಬ್ಬಳ್ಳಿಯಲ್ಲಿ ಅಪ್ರಾಪ್ತೆ ಕಿಡ್ನ್ಯಾಪ್ ಲೈಗಿಂಕ ದೌರ್ಜನ್ಯ : ಪೊಲೀಸರ ಮೌನ
ಹುಬ್ಬಳ್ಳಿಯಲ್ಲಿ 72 ಗಂಟೆಗಳ ಹಿಂದೆ ಕುಖ್ಯಾತ ರೌಡಿಯೊಬ್ಬನಿಂದ ಅಪ್ರಾಪ್ತೆಯ ಅಪಹರಣ ಲೈಂಗಿಕ ದೌರ್ಜನ್ಯ.
ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ಗೊತ್ತಿದ್ದರೂ ವಿವರ ನೀಡಲು ಅಸಾಧ್ಯ ಕಾರಣ ಈ ಕುರಿತು ಪ್ರಕರಣ ದಾಖಲಾಗಿಲ್ಲ.
1.
ಲವ್ ಜಿಹಾದ್-ಮಗಳಿಗಾಗಿ ಪೋಷಕರ ಹೋರಾಟ !
ಹುಬ್ಬಳ್ಳಿಯ ಹಿಂದೂ ಯುವತಿಯನ್ನ ನಂಬಿಸಿ ಲವ್ ಮಾಡಿ ಮುಸ್ಲಿಂ ಯುವಕನೊಬ್ಬ ಮದುವೆ ಆಗಿದ್ದಾನೆ. ಇದನ್ನ ವಿರೋಧಿಸಿ ಯುವತಿಯ ಪೋಷಕರು ಇಂದು ಉಪನಗರ ಪೊಲೀಸ್ ಠಾಣೆ ಎದುರು ಎಸ್.ಎಸ್.ಕೆ. ಸಮಾಜದವರೊಂದಿಗೆ ಪ್ರತಿಭಟನೆ ಮಾಡಿದ್ದಾರೆ. ಮಾಟ-ಮಂತ್ರ ಮಾಡಿ ನಮ್ಮ ಹುಡುಗಿಯನ್ನ ಮುಸ್ಲಿಂ ಯುವಕ ಓಡಿಸಿಕೊಂಡು ಹೋಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
https://publicnext.com/article/nid/Hubballi-Dharwad/Crime/Law-and-Order/node=633992
======
2.
ಅಕ್ರಮ ಮದ್ಯ ಮಾರಾಟದ ವಿರುದ್ಧ ಹೋರಾಟ
ಹುಬ್ಬಳ್ಳಿಯ ಬಹುತೇಕ ಖಾನಾವಳಿ,ಡಾಬಾ ಮತ್ತು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿದೆ. ಇದರ ವಿರುದ್ಧ ಯಾವುದೇ ಕ್ರಮಗಳನ್ನ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಮಗ್ರ ಕರ್ನಾಟಕ ರಕ್ಷಣಾ ಸೇನೆ ಇಂದು ಚನ್ನಮ್ಮ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿದೆ. ಪ್ರತಿಭಟನೆ ಸಮಯದಲ್ಲಿ ಕಾರ್ಯಕರ್ತರು ಗಾಂಧಿಜೀ ಭಾವಚಿತ್ರ ಹಿಡಿದುಕೊಂಡಿದ್ದರು. ಅದರ ಎದುರು ವಿಸ್ಕಿ ಬಾಟಲಿ ಹಿಡಿದಿದ್ದು ಆಕ್ರೋಶ ಹೊರ ಹಾಕಿದರು.
https://publicnext.com/article/nid/Hubballi-Dharwad/Government/News/Public-News/node=633965
======
3.
ಬಡ ಜನರ ಜೀವ ಹಿಂಡುತ್ತಿದೆ ಬೆಟ್ಟಿಂಗ್ ದಂಧೆ
ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದೆ. ಇದರ ಏಟಿಗೆ ಬಡವರೇ ಬಲಿ ಆಗುತ್ತಿದ್ದಾರೆ. ಐಪಿಎಲ್ ಪಂದ್ಯ ಶುರು ಆಗಿದ್ದೇ ತಡ. ಎಲ್ಲೆಡೆ ಬೆಟ್ಟಿಂಗ್ ದಂಧೆ ಶುರು ಆಗಿ ಬಿಡುತ್ತದೆ. ಈ ಸಂಬಂಧ ಈಗಾಗಲೇ 20 ಪ್ರಕರಣಗಳು ದಾಖಲಾಗಿವೆ. ಬುಕ್ಕಿಗಳು ಸೇರಿ 40 ಜನ ಬಂಧನ ಆಗಿದೆ. ಆದರೂ ಬೆಟ್ಟಿಂಗ್ ದಂಧೆ ನಡೆಯುತ್ತಲೇ ಇದೆ.
https://publicnext.com/article/nid/Hubballi-Dharwad/Crime/Law-and-Order/node=633730
==========
4.
ಕಾರು-ಬಸ್ ಡಿಕ್ಕಿ: ಇಬ್ಬರ ಸಾವು-6 ಜನ ಗಾಯ
ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಕಾರ್ ಗೆ ವೋಲ್ವೋ ಬಸ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. 6 ಜನಕ್ಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಬ್ಬಳ್ಳಿ-ಗದಗ ರಾಷ್ಟ್ರೀಯ ಹೆದ್ದಾರಿ ಶಿರಗುಪ್ಪಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಗಾಯಾಳುಗಳು ಕಿಮ್ಸ್ ಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಎಸ್.ಪಿ.ಕೃಷ್ಣಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://publicnext.com/article/nid/Hubballi-Dharwad/Accident/node=633687
==========
5.
ಪಕ್ಕದ ಮನೆ ಕಲಹ-ವ್ಯಕ್ತಿ ಆತ್ಮಹತ್ಯೆಯಲ್ಲಿ ಅಂತ್ಯ
ಕಲಘಟಗಿಯಲ್ಲಿ ಪಕ್ಕದ ಮನೆ ಕಲಹದಿಂದ ತಾಲೂಕಿನ ಗಾಂಧಿನಗರ ನಿವಾಸಿ ಹನುಮಂತಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪಕ್ಕದ ಮನೆಯವರ ಕಿರುಕುಳದಿಂದ ನಿತ್ಯವೂ ಜಗಳವಾಗುತ್ತಿತ್ತು. ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಇದಕ್ಕೆ ಪರಿಹಾರ ಸಿಕ್ಕಿಯೇ ಇಲ್ಲ. ಈ ಒಂದು ಕಾರಣಕ್ಕೇನೆ ಹನುಮಂತಪ್ಪ ನೇಣಿಗೆ ಶರಣಾಗಿದ್ದಾರೆ. ಪೊಲೀಸರ ನಿರ್ಲಕ್ಷ್ಯಕ್ಕೂ ಬೇಸರಗೊಂಡ ಹನುಮಂತಪ್ಪ ಪತ್ನಿ ದುರ್ಗಮ್ಮ, ಪೊಲೀಸ್ ಠಾಣೆ ಎದುರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://publicnext.com/article/nid/Hubballi-Dharwad/Crime/node=633646
========
6.
ಜೆ.ಜೆ.ನಗರದ ಚಂದ್ರು ಹತ್ಯೆ-ಸಂಪೂರ್ಣ ತನಿಖೆ ಆಗಲೇಬೇಕು !
ಬೆಂಗಳೂರು ಜೆ.ಜೆ.ನಗರದ ಚಂದ್ರು ಹತ್ಯೆ ಆಗಿದೆ. ಈ ಹುಡುಗನನ್ನ ಮುಸ್ಲಿಂ ಹುಡುಗರು ಕ್ರೂರವಾಗಿಯೇ ಹತ್ಯೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ಆಗಲೇಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಒತ್ತಾಯಿಸಿದ್ದಾರೆ.
https://publicnext.com/article/nid/Hubballi-Dharwad/Politics/Crime/Religion/node=633960
=======
7.
ಬಿಜೆಪಿ ರಾಜ್ಯದ ಸಾಮರಸ್ಯ ಹಾಳು ಮಾಡುತ್ತಿದೆ !
ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿಯ ಸಾಮರಸ್ಯವನ್ನ ಹಾಳು ಮಾಡುತ್ತಿದೆ. ಜನರ ಬಳಿ ಹೋಗಲು ಇವರ ಬಳಿ ಯಾವುದೇ ಸಾಧನೆ ಇಲ್ಲ. ಇದನ್ನ ಮರೆಮಾಚಲು ಧಾರ್ಮಿಕ ವಿಚಾರಕ್ಕೆ ಮುಂದಾಗಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
https://publicnext.com/article/nid/Hubballi-Dharwad/Politics/node=633908
===============
8.
ಮತ್ತೆ ಕೇಳಿ ಬರ್ತಿದೆ ಪ್ರತ್ಯೇಕ ಪಾಲಿಕೆ ಕೂಗು !
ಹುಬ್ಬಳ್ಳಿ-ಧಾರವಾಡ ಸೇರಿ ಸದ್ಯ ಒಂದೇ ಮಹಾನಗರ ಪಾಲಿಕೆ ಇದೆ. ಆದರೆ ಇದರಿಂದ ಧಾರವಾಡ ಅಭಿವೃದ್ಧಿ ಆಗುತ್ತಿಲ್ಲ ಎಂದು ಪ್ರತ್ಯೇಕ ಮಹಾನಗರ ಪಾಲಿಕೆ ಕೂಗು ಕೇಳಿ ಬರ್ತಾನೆ. ಇದಕ್ಕಾಗಿಯೇ ಈಗ ಒಂದು ವೇದಿಕೆ ಕೂಡ ಹುಟ್ಟುಕೊಂಡಿದೆ. ಈ ವೇದಿಕೆಯಲ್ಲಿರೋ ಧಾರವಾಡದ ಹಿರಿಯ ನಾಗರಿಕರೂ ಈ ಸಂಬಂಧ ಪ್ರತಿಭಟನೆ ಕೂಡ ಮಾಡಿದ್ದಾರೆ.
https://publicnext.com/article/nid/Hubballi-Dharwad/Infrastructure/Government/node=633880
=======
9.
ಶೇಕಡ 1 ರಷ್ಟುಇಳಿಕೆ ಕಂಡ ಮಹಾನಗರ ಪಾಲಿಕೆ ಕರ ಸಂಗ್ರಹ
ಹುಬ್ಬಳ್ಳಿಯ ಮಹಾನಗರ ಪಾಲಿಕೆ ಕರ ಸಂಗ್ರಹದಲ್ಲಿ ಇಳಿಕೆ ಕಂಡಿದೆ. ಕಳೆದ ವರ್ಷ ಇನ್ನೂ ಚೆನ್ನಾಗಿಯೇ ಇತ್ತು. ಆದರೆ ಈ ವರ್ಷ ಕೇವಲ 73.96 ರಷ್ಟು ಕರ ಸಂಗ್ರವಾಗಿದ್ದು, ಕಳೆದ ಬಾರಿಗಿಂತಲೂ ಶೇಕಡ 1 ರಷ್ಟು ಕರ ಸಂಗ್ರಹ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿಯೇ ಪಾಲಿಕೆಯ ಆಯುಕ್ತರು ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.
https://publicnext.com/article/nid/Hubballi-Dharwad/Infrastructure/Business/Government/node=633805
======
10.
ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು !
ಕುಂದಗೋಳ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಬಿಜೆಪಿ ಪಕ್ಷದ ವಿಪ್ ಉಲ್ಲಂಘನೆ ಆಗಿದೆ. ಈ ಹಿನ್ನೆಲೆಯಲ್ಲಿಯೇ ಈಗ ಮೂವರು ಸದಸ್ಯರ ಸದಸ್ಯತ್ವ ರದ್ದಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸದ್ಯಸರು ವಿಪ್ ಉಲ್ಲಂಘಟನೆ ಮಾಡಿದ್ದರು.
https://publicnext.com/article/nid/Hubballi-Dharwad/Politics/Law-and-Order/node=633802
=============
Kshetra Samachara
06/04/2022 09:53 pm