ವರದಿ-ಮಲ್ಲೇಶ ಸೂರಣಗಿ
ಹುಬ್ಬಳ್ಳಿ: ಅದು ಪ್ರಖ್ಯಾತಿ, ಕುಖ್ಯಾತಿ ಎರಡನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ನಗರ. ಈ ನಗರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅಕ್ರಮ ಚಟುವಟಿಕೆಗಳು ಗರಿಗೆದರುತ್ತಲೇ ಇದೆ. ಆಟವನ್ನು ಮನರಂಜನೆ ಬಳಸದೇ ಬೆಟ್ಟಿಂಗ್ ಮೂಲಕ ನಗರವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಹಾಗಿದ್ದರೇ ಅಲ್ಲಿ ಆಗಿದ್ದಾದರೂ ಏನು ಅಂತೀರಾ. ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಪೋಟಕ ಮಾಹಿತಿ.
ಹೌದು.. ಐಪಿಎಲ್ ಸ್ಟಾರ್ಟ್ ಆಗಿದ್ದೇ ತಡ, ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ದಂಧೆ ರೆಕ್ಕೆ ಪುಕ್ಕಗಳೊಂದಿಗೆ ಗರಿ ಬಿಚ್ಚಿ ಹಾರಾಡಲು ಸ್ಟಾರ್ಟ್ ಮಾಡುತ್ತದೆ. ಐಪಿಎಲ್ ಕ್ರಿಕೆಟ್ ಆಟಕ್ಕೆ ಟಾಸ್ ಆಗುತ್ತಿದ್ದಂತೆ ಬುಕ್ಕಿಗಳ ವ್ಯಾಪ್ತಿ ವಿಸ್ತರಿಸುತ್ತದೆ. ಅಲ್ಲದೇ ಅದೆಷ್ಟೋ ಅಮಾಯಕರು ಗೊತ್ತಿದ್ದೋ ಗೊತ್ತಿಲ್ಲದೆಯೋ. ಮನೆ ಮಠ ಕಳೆದುಕೊಂಡ ಬೀದಿಗೆ ಬಿದ್ದಿದ್ದಾರೆ. ಐಪಿಎಲ್ ಆಟ ಆರಂಭವಾಗಿ ಕೆಲವು ದಿನಗಳಾದರೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು, 40 ಕ್ಕೂ ಹೆಚ್ಚು ಜನರನ್ನು ಅರೆಸ್ಟ್ ಮಾಡಲಾಗಿದೆ. ಇದರಲ್ಲಿ ಬುಕ್ಕಿಗಳೂ ಇದ್ದಾರೆ. ಹೀಗಿದ್ದರೂ ಬೆಟ್ಟಿಂಗ್ ಮಾತ್ರ ಬೆಟ್ಟದಂತೆ ಬೆಳೆಯುತ್ತಲೇ ಇದೆ.
ಬಗೆದಷ್ಟು ಆಳದಂತೆ ಈ ಜಾಲ ಸಕ್ರೀಯವಾಗಿ ಬೇರು ಬಿಟ್ಟಿದ್ದರೂ ಬೆರಳು ಎಣಿಕೆಯಷ್ಟು ಪ್ರಕರಣಗಳು ಮಾತ್ರ ದಾಖಲಾಗಿವೆ. ಕಾಲೇಜು ವಿದ್ಯಾರ್ಥಿಗಳು, ದಿನಗೂಲಿಯ ಕಾರ್ಮಿಕರು ಸೇರಿದಂತೆ ಅನೇಕರು ಬೆಟ್ಟಿಂಗ್ ದಂಧೆಯ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಬೆಟ್ಟಿಂಗ್ ದಂಧೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡ ಬುಕ್ಕಿಗಳು ಅಮಾಯಕರಿಗೆ ಖೆಡ್ಡ ತೋಡಲು ಈ ಜಾಲವನ್ನು ಹೆಣೆಯುತ್ತಿದ್ದು, ಹಣ ಮಾಡುವ ದುರಾಸೆಯಿಂದ ವಾಣಿಜ್ಯನಗರಿ ಹುಬ್ಬಳ್ಳಿಯ ಕೀರ್ತಿಗೆ ಕಪ್ಪು ಮಸಿ ಬಳಿಯುತ್ತಿದ್ದಾರೆ. ಆದರೆ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ಒಟ್ಟಿನಲ್ಲಿ ಅರ್ಜಂಟ್ ಆಗಿ ದುಡ್ಡು ಮಾಡೋಕೆ ಶಾರ್ಟ್ ಕಟ್ ದಾರಿ ಕಂಡು ಕೊಂಡು ಬೆಟ್ಟಿಂಗ್ ದಂಧೆಗೆ ಇಳಿದವರು ದೊಡ್ಡ ಪ್ರಪಾತಕ್ಕೆ ಬಿಳುವುದಂತೂ ಖಂಡಿತ. ಇಂತಹ ಅವ್ಯವಸ್ಥೆಗೆ ಪೊಲೀಸ್ ಆಯುಕ್ತರು ಬ್ರೇಕ್ ಹಾಕಿ ಬೆಟ್ಟಿಂಗ್ ಭೂತದಿಂದ ಅಮಾಯಕರನ್ನು ಬಚಾವ್ ಮಾಡಬೇಕಿದೆ.
Kshetra Samachara
06/04/2022 11:31 am