1.
ಸರಣಿ ಮನೆಗಳ್ಳತನ
ಧಾರವಾಡದ ಕೆಲಗೇರಿ ಅಂಜನೇಯನಗರದಲ್ಲಿ ಸರಣಿ ಮನೆಗಳ್ಳತನ ನಡೆದಿದೆ. ಮೂರ್ನಾಲ್ಕು ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದು ನಗನಾಣ್ಯ ದೋಚಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://publicnext.com/article/nid/Hubballi-Dharwad/Crime/node=629633
2
ನನ್ನ ಸಾವಿಗೆ ಮೂವರು ಕಾರಣ
ನವಲೂರು-ಉಣಕಲ್ ರೈಲು ನಿಲ್ದಾಣಗಳ ನಡುವಿನ ಹಳಿಗೆ ತಲೆ ಕೊಟ್ಟು ಚನ್ನಬಸಯ್ಯ ಹಿರೇಮಠ ಎಂಬ 29 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ಮೂವರು ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://publicnext.com/article/nid/Hubballi-Dharwad/Crime/node=629526
3.
ಬಲೆಗೆ ಬಿದ್ದ ಖತರ್ನಾಕ್ ದರೋಡೆಕೋರರು
ಅಣ್ಣಿಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ಲಕ್ಷಾಂತರ ನಗದು ದರೋಡೆ ಮಾಡಿದ್ದ ನಾಲ್ವರು ಖತರ್ನಾಕ್ ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 96 ನಗದು ಹಣ ವಶಕ್ಕೆ ಪಡೆದು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
https://publicnext.com/article/nid/Hubballi-Dharwad/Crime/node=629504
4.
ಕಂಡಲ್ಲಿ ಕಸ ಚೆಲ್ಲಿದರೆ ದಂಡ
ಎಲ್ಲೆಂದರಲ್ಲಿ ಕಸ ಚೆಲ್ಲಿದರೆ ದಂಡ ಬೀಳಲಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯ ಕಚೇರಿ 6ರ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಕಸ ಚೆಲ್ಲಿದವರಿಗೆ ಅಧಿಕಾರಿಗಳು ದಂಡ ಹಾಕಿದ್ದಾರೆ.
https://publicnext.com/article/nid/Hubballi-Dharwad/Crime/node=629533
5.
ಬೆಲೆ ಏರಿಕೆಗೆ ಕಾಂಗ್ರೆಸ್ ಕಿಡಿ
ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಬೀದಿಯಲ್ಲಿ ಗ್ಯಾಸ್ ಸಿಲಿಂಡರ್ ಇಟ್ಟು ಹೂಮಾಲೆ ಹಾಕಿ ನಗಾರಿ ಬಾರಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://publicnext.com/article/nid/Hubballi-Dharwad/Politics/node=629674
6.
ಬಡ ಚಾಲಕನಿಗೆ ಸಹಾಯ ಮಾಡಿ
ಗ್ಯಾಂಗ್ರೀನ್ ಕಾಯಿಲೆಗೆ ತುತ್ತಾದ ಬಡ ಟ್ಯಾಕ್ಸಿ ಚಾಲಕ ವಿರೂಪಾಕ್ಷ ಬಸಪ್ಪ ಕಟಗಿ ಅವರು ಈ ಕಡೆ ದುಡಿಮೆಯೂ ಇಲ್ಲದೇ ಆ ಕಡೆ ಚಿಕತ್ಸೆಗೂ ಹಣವೂ ಇಲ್ಲದೇ ಸಂಕಟ ಅನುಭವಿಸುತ್ತಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆಗಾಗಿ ಹಣ ಅವಶ್ಯವಾಗಿದ್ದು ದಾನಿಗಳು ಸಹಾಯ ಮಾಡುವಂತೆ ಕೋರಿದ್ದಾರೆ.
https://publicnext.com/article/nid/Hubballi-Dharwad/Health-and-Fitness/Human-Stories/node=629839
7.
ತೆರವು ಪೂರ್ಣಗೊಳಿಸಿ
ನವಲಗುಂದದ ಅಂಬೇಡ್ಕರ್ ನಗರದ ರಸ್ತೆಯ ಚರಂಡಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಕೂಡಲೇ ಒತ್ತುವರಿಯಾದ ಜಾಗವನ್ನು ಪುರಸಬೆ ಅಧಿಕಾರಿಗಳು ತೆರವುಗೊಳಿಸಬೇಕು. ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಪುರಸಭೆಗೆ ಮನವಿ ಮಾಡಿದ್ದಾರೆ.
https://publicnext.com/article/nid/Hubballi-Dharwad/Law-and-Order/Government/node=629676
8.
ಕ್ರೀಡಾ ಸಾಧಕಿ ಈ ಶಿಕ್ಷಕಿ
ಚಂಡೀಗಡದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಶಿಕ್ಷಕಿ ಸರಸ್ವತಿ ಸುಣಗಾರ ಅವರು ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಾರೆ. ಸದ್ಯ ಇವರು ನವಲಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 4ರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
https://publicnext.com/article/nid/Hubballi-Dharwad/Sports/node=629941
9.
ಕರ್ನಾಟಕ ಬ್ಯಾಂಕ್ ಉದ್ಘಾಟಿಸಿದ ವಿಎಸ್‌ವಿ ಪ್ರಸಾದ್
ಹುಬ್ಬಳ್ಳಿಯ ಕೇಶ್ವಾಪೂರ ರಸ್ತೆಯಲ್ಲಿ ಆರಂಭಿಸಲಾಗಿರುವ ಕರ್ನಾಟಕ ಬ್ಯಾಂಕ್‌ನ 887 ನೇ ಶಾಖೆಯನ್ನು ಸ್ವರ್ಣ ಗ್ರುಪ್ ಆಫ್ ಕಂಪನೀಸ್ ಮಾಲೀಕರಾದ ವಿಎಸ್‌ವಿ ಪ್ರಸಾದ್ ಉದ್ಘಾಟಿಸಿದ್ದಾರೆ. ಬಳಿಕ ಎಟಿಎಂ ಘಟಕಕ್ಕೂ ಚಾಲನೆ ನೀಡಿದ್ದಾರೆ.
10.
ಯುಗಾದಿ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು
ಯುಗಾದಿ ಹಬ್ಬದ ಅಂಗವಾಗಿ ಹುಬ್ಬಳ್ಳಿಯ ಎಸ್‌ಎಸ್‌ಕೆ ಸಮಾಜದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹರ್ ಘರ್ ಭಗವಾ- ಘರ್ ಘರ್ ಬಗವಾ ಎಂಬ ಅಭಿಯಾನ ಕೂಡ ಯುಗಾದಿ ಸಂದರ್ಭದಲ್ಲಿ ನಡೆಯಲಿದೆ ಎಂದು ಎಸ್‌ಎಸ್‌ಕೆ ಸಮಾಜದ ಮುಖಂಡ ಹನುಮಂತಸಾ ನಿರಂಜನ್ ಹೇಳಿದ್ದಾರೆ.
https://publicnext.com/article/nid/Hubballi-Dharwad/Cultural-Activity/Religion/node=629882
Kshetra Samachara
31/03/2022 10:18 pm