ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯುಗಾದಿ ಹಾಗೂ ಶ್ರೀರಾಮ ನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಹುಬ್ಬಳ್ಳಿ: ಈ ವರ್ಷ ಯುಗಾದಿ ಹಾಗೂ ಶ್ರೀರಾಮ ನವಮಿ ಪ್ರಯುಕ್ತ ವಿವಿಧ ದಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಕೆ ಸಮಾಜದ ಚಿಂತನ ಮಂತನ ಸಮಿತಿಯ ಮುಖ್ಯಸ್ಥ ಹನುಮಂತಸಾ ನಿರಂಜನ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್ 2 ಯುಗಾದಿಯ ದಿನದಂದು ಎಸ್‌ಎಸ್‌ಕೆ ಸಮಾಜವನ್ನು ಕೇಂದ್ರಿಕೃತ ಮಾಡಿಕೊಂಡು ಹರ್ ಘರ್ ಭಗವಾ- ಘರ್ ಘರ್ ಭಗವಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರಣ ಈಗಾಗಲೆ ಎಸ್‌ಎಸ್‌ಕೆ ಸಮಾಜದ ಮುಖಂಡರಿಂದ 2 ಸಾವಿರಕ್ಕೂ ಹೆಚ್ಚು ಧ್ವಜಗಳನ್ನು ವಿತರಿಸಲಾಗಿದೆ. ಯುಗಾದಿ ದಿನದಂದು ಈ ಧ್ವಜವನ್ನು ಎಸ್‌ಎಸ್‌ಕೆ ಸಮಾಜದ ಕುಟುಂಬಗಳ ಮನೆಯ ಮೇಲೆ ಏಕಕಾಲಕ್ಕೆ ಹಾರಿಸಲಾಗುತ್ತದೆ ಎಂದು ಅವರು ಹೇಳಿದರು.

Edited By : Manjunath H D
Kshetra Samachara

Kshetra Samachara

31/03/2022 07:15 pm

Cinque Terre

13.18 K

Cinque Terre

0

ಸಂಬಂಧಿತ ಸುದ್ದಿ