ಕುಂದಗೋಳ: ಗಣೇಶ ಚತುರ್ಥಿ ಸಂಭ್ರಮದ ವಿದಾಯ ಬಳಿಕ ಹಳ್ಳಿಗಳಲ್ಲಿ ಈದೀಗ ರೈತಾಪಿ ಮಳೆ ಬೆಳೆ ಕಾಯಕಕ್ಕೆ ಆಶೀರ್ವದಿಸಲು ಜೋಕುಮಾರಸ್ವಾಮಿ ಹುಟ್ಟಿ ಬಂದಿದ್ದಾನೆ.
ತನ್ನ ಹುಟ್ಟಿನಿಂದ ಏಳು ದಿನಗಳ ಕಾಲ ಜೀವಂತವಿರುವ ಜೋಕುಮಾರಸ್ವಾಮಿ ಹಳ್ಳಿ ಹಳ್ಳಿಯ ರೈತರ ಮನೆ ಮನೆಗೆ ತೆರಳಿ ರೈತನು ನೀಡುವ ದವಸ ಧಾನ್ಯಗಳನ್ನು ನೀಡುತ್ತ ಭಕ್ತಿ ಸಮರ್ಪಣೆಗೆ ಪಾತ್ರವಾಗಲಿದ್ದಾನೆ.
ಜೋಕುಮಾರಸ್ವಾಮಿಗೆ ಇಷ್ಟವಾದ ಕಿಚಡಿಯನ್ನು ರೈತರು ಪ್ರಸಾದದ ರೂಪದಲ್ಲಿ ಪಡೆದು ಹೊಲಕ್ಕೆ ಹಾಕಿ ಸಮೃದ್ಧ ಬೆಳೆಗಾಗಿ ಪ್ರಾರ್ಥನೆ ಮಾಡುವುದು ವಾಡಿಕೆ. ಹೀಗೆ ಏಳು ದಿನಗಳ ಕಾಲ ಊರೂರು ಸುತ್ತುವ ಜೋಕುಮಾರನು ಊರ ರೈತನ ಮನೆಗೆ ಬಂದಾಗ ಬಿಸಿಲಿನ ತಾಪಕ್ಕೆ ಬಿರುಕು ಬಿಟ್ಟು ಕೊನೆಗೆ ಅಗಸರ ಮನೆ ಕಲ್ಲಿಗೆ ಸಿಕ್ಕು ಜನ್ಮ ಬಿಡುತ್ತಾನೆ ಎಂಬ ಪ್ರತೀತಿ ಇದೆ.
ಸದ್ಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಯಲ್ಲಪ್ಪ ಅಮಾತಿ ಇವರು ತಲ ತಲಾಂತರದಿಂದ ಜೋಕುಮಾರಸ್ವಾಮಿ ಮೂರ್ತಿಯನ್ನು ತಯಾರಿಸಿ ಏಳು ದಿನಗಳ ಕಾಲ ಗ್ರಾಮದ ರೈತರ ಮನೆಗೆ ತೆರಳಿ ಲೋಕದ ಒಳಿತಿಗಾಗಿ ರೈತರ ಮಳೆ ಬೆಳೆಗಾಗಿ ಪ್ರಾರ್ಥನೆಗೆ ಊರೂರು ಅರಸುತ್ತಾ ಪುರಾತನ ಸಂಸ್ಕೃತಿಗೆ ಜೀವ ತುಂಬಿದ್ದಾರೆ.
Kshetra Samachara
07/09/2022 12:41 pm