ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಗಜರಾಜನೊಂದಿಗೆ ರಾಜವೈಭವದಿಂದ ಶಿವಯೋಗಿಗಳವ ಮೆರವಣಿಗೆ!

ನವಲಗುಂದ: ಸುಕ್ಷೇತ್ರ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ಶ್ರೀ ಮಜ್ಜಗದ್ಗುರು ಸಾಧು ಸಿದ್ದ ಶಿವಯೋಗಿಗಳವರ 96ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಗಜರಾಜನೊಂದಿಗೆ ಶಿವಯೋಗಿಗಳವರ ಭಾವಚಿತ್ರವನ್ನಿಟ್ಟು ಪಲ್ಲಕ್ಕಿ ಉತ್ಸವವನ್ನು ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿಸಲಾಯಿತು.

ಸೋಮವಾರ ಬೆಳಿಗ್ಗೆ 6 ಗಂಟೆಗೆ ಸದ್ಗುರು ಶ್ರೀ ಸಾಧು ಸಿದ್ದ ಶಿವಯೋಗಿಗಳವರ ಕತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಯಿತು. ಮಧ್ಯಾಹ್ನ 1:00 ಯಿಂದ ಮಹಾಪ್ರಸಾದ ಜರುಗಿತು.

ರಾತ್ರಿ ಹತ್ತರಿಂದ ಮಂಗಳವಾರ ಮುಂಜಾನೆಯವರೆಗೆ ಶ್ರೀ ಸದ್ಗುರು ಸಾಧು ಸಿದ್ದ ಶಿವಯೋಗಿಗಳವರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಉತ್ಸವವು ಶಿರಹಟ್ಟಿಯ ಶ್ರೀ ಫಕ್ಕೀರೇಶ್ವರ ಮಹಾಸ್ವಾಮಿಗಳ ಮಠದ ಗಜರಾಜನೊಂದಿಗೆ ಹಾಗೂ ಸಕಲ ಬಿರುದ್ಧಾವಳಿಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ರಾಜವೈಭವದೊಂದಿಗೆ ಮೆರವಣಿಗೆಯನ್ನು ನೆರವೇರಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

26/07/2022 11:50 am

Cinque Terre

28.27 K

Cinque Terre

0

ಸಂಬಂಧಿತ ಸುದ್ದಿ