ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮೇ.20 ರಂದು ಯರಗುಪ್ಪಿಯಲ್ಲಿ ಸಾಮೂಹಿಕ ವಿವಾಹ

ಕುಂದಗೋಳ: ಬಡವರ ಬಂಧು ಮಾಜಿ ಸಚಿವ ದಿ.ಸಿ.ಎಸ್ ಶಿವಳ್ಳಿ ಅವರ ಸ್ಮರಣಾರ್ಥ ಯರಗುಪ್ಪಿ ಗ್ರಾಮದಲ್ಲಿ ಮೇ 20 ರಂದು ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಈ ವೇಳೆ 501 ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ವಿವಾಹ ವೇಳೆ ವಧು-ವರರಿಗೆ ಉಚಿತ ಬಟ್ಟೆ ತಾಳಿ, ಕಾಲುಂಗುರ, ಬಾಷಿಂಗ ನೀಡಲಾಗುವುದು.

ಮದುವೆ ಸಂಪೂರ್ಣ ಉಚಿತವಾಗಿದ್ದು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ, ವಧುವಿಗೆ 18 ಮತ್ತು ವರನಿಗೆ 21 ವರ್ಷ ವಯಸ್ಸು ಆಗಿರಬೇಕು. ಮತ್ತು ಎರಡನೇ ಮದುವೆಗೆ ಅವಕಾಶ ಇರಲ್ಲ, ಬಾಲ್ಯ ವಿವಾಹಕ್ಕೆ ಅವಕಾಶ ಇರಲ್ಲ, ಜನ್ಮ ದಾಖಲೆ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು.

ಮದುವೆಗೆ ಹೆಸರು ನೋಂದಾಯಿಸುವವರು ಮೇ 15ರ ಒಳಗಾಗಿ ಈ ಸಂಖ್ಯೆಗೆ 9448373376 ಶ್ರೀಮತಿ ಕುಸುಮಾವತಿ ಸಿ. ಶಿವಳ್ಳಿ 9845303857 ಅಡಿವೆಪ್ಪ ಎಸ್ ಶಿವಳ್ಳಿ 9741197874 ಬಾಬಣ್ಣ ಬೆಟಗೇರಿ ಇವರಿಗೆ ಸಂಪರ್ಕಿಸಬೇಕೆಂದು ಶಾಸಕಿ ಕುಸುಮಾವತಿ ಶಿವಳ್ಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

21/04/2022 02:07 pm

Cinque Terre

8.37 K

Cinque Terre

0

ಸಂಬಂಧಿತ ಸುದ್ದಿ