ಹುಬ್ಬಳ್ಳಿ: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನಿಧ್ಯದಲ್ಲಿ ಲಿ. ಶ್ರೀ ವೇ.ಮೂ. ಕಾಡಯ್ಯ ಹಿರೇಮಠ ಇವರ 81 ನೇ ಜನ್ಮ ಸಂಸ್ಮರಣ ದಿನಾಚರಣೆ ಪ್ರಯುಕ್ತ ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಇದೇ ವೇಳೆ 'ಕಂಚಿನ ಪುತ್ಥಳಿ ಅನಾವರಣ ಹಾಗೂ ಮಾನವೀಯ ಮೂರ್ತಿ ಸಂಸ್ಮರಣ ಗ್ರಂಥ ಬಿಡುಗಡೆ' ಕಾರ್ಯಕ್ರಮವನ್ನು ಮಾ. 6 ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುಸುಗಲ್ ರಸ್ತೆಯ ಕೆ.ಜಿ. ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಜಿ.ವಿ. ಕಲಾ ಬಳಗದ ಗದಿಗೆಯ್ಯಾ ಹಿರೇಮಠ ಹಾಗೂ ಮಂಜುನಾಥ ಉಡುಪಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಅಂದಿನ ಕಂಚಿನ ಪುತ್ಥಳಿ ಅನಾವರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ.
ಸಭೆಯ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, 'ಮಾನವೀಯ ಮೂರ್ತಿ' ಸಂಸ್ಮರಣ ಗ್ರಂಥ ಬಿಡುಗಡೆಯನ್ನು ಮಾಜಿ ಮುಖ್ಯಮಂತ್ರಿ, ಶಾಸಕರಾದ ಜಗದೀಶ್ ಶೆಟ್ಟರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಹೊರಟ್ಟಿ ಜೊತೆಗೆ ಇನ್ನು ಅನೇಕರು ಭಾಗವಹಿಸಲಿದ್ದಾರೆ ಎಂದರು.
Kshetra Samachara
04/03/2022 02:49 pm