ಕುಂದಗೋಳ: ಇಂದು ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿ. ಅದರ ಅಂಗವಾಗಿ ಕುಂದಗೋಳ ಪಟ್ಟಣದ ಎಲ್ಲೆಡೆ ಶಿವಾಜಿ ಮಹಾರಾಜ ವೇಷಧಾರಿಯೊಬ್ಬರು ಕೇಸರಿ ಧ್ವಜ ಹಿಡಿದು, ಸ್ಕೂಟರ್ ಏರಿ ಪಟ್ಟಣದ ಎಲ್ಲೆಡೆ ಸುತ್ತಾಟ ಆರಂಭಿಸಿದ್ದಾರೆ. ಈ ಮೂಲಕ ಜನತೆಗೆ ಶಿವಾಜಿ ಮಹಾರಾಜರ ತತ್ವಾದರ್ಶ ಹಾಗೂ ಜೀವನ ಸಂದೇಶ, ರಾಷ್ಟ್ರ ಪ್ರೇಮದ ಏಕತೆಯ ಪಾಠ ಮಾಡುತ್ತಿದ್ದಾರೆ.
ಕುಂದಗೋಳ ಪಟ್ಟಣದ ಶಂಭಾಜಿ ತಡಸದ ಎಂಬುವವರೇ ಇಂದು ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ವಿಶೇಷವಾಗಿ ಶಿವಾಜಿ ಮಹಾರಾಜರ ವೇಷ ತೊಟ್ಟು, ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ, ಮಾರ್ಕೆಟ್ ರಸ್ತೆ, ಶಿವಾಜಿನಗರ ಕಿಲ್ಲಾ ಓಣಿ, ಮೂರಂಗಡಿ ಕ್ರಾಸ್ ಸೇರಿದಂತೆ ಕುಂದಗೋಳ ಪಟ್ಟಣದ ವಿವಿಧೆಡೆ ಸಂಚರಿಸಿ ಶಿವಾಜಿ ಮಹಾರಾಜರ ಜಯಂತಿಯ ಸಾರ ಹಾಗೂ ಆದರ್ಶವನ್ನು ತಮ್ಮ ವೇಷದ ಮೂಲಕ ಸಾರುತ್ತಿದ್ದಾರೆ.
Kshetra Samachara
19/02/2022 02:06 pm