ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಸರ್ಕಾರಿ ನೌಕರರಿಗೆ ರೈತ ಸಂಘದ ಸನ್ಮಾನ

ಕಲಘಟಗಿ: ಕೊರೊನಾ ಹಾಗೂ ಇತರೆ ಸಮಯದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸೇವೆ ಸಲ್ಲಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಜ್ಯೋತಿಬಾ.ಹುಲಕೊಪ್ಪ ಹೇಳಿದರು.

ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಜ್ಯೋತಿಬಾ.ಹುಲಕೊಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಕ್ರಷಿ ಇಲಾಖೆ ಅಧಿಕಾರಿ ಎನ್.ಎಪ್ ಕಟ್ಟೆಗೌಡ್ರ.ಅರಣ್ಯ ಇಲಾಖೆಯು ಅಧಿಕಾರಿ ಶ್ರೀಕಾಂತ ಪಾಟೀಲ.ವೈದ್ಯಾಧಿಕಾರಿ ಡಾ.ಬಸವರಾಜ.ಬಾಸೂರ.ಸರ್ವೆ ಇಲಾಖೆ ಅಧಿಕಾರಿ ಎಸ್.ವಿ.ಕುಲಕರ್ಣಿ, ಪ.ಪಂ.ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೀಣಾ.ಎಂ.ಹೆಸ್ಕಾಂ ಅಧಿಕಾರಿ,ಅಬಕಾರಿ ಅಧಿಕಾರಿ ಅಮೀತ ಬೆಳ್ಳುಬ್ಬಿ.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎ.ಜೆ.ಯೋಗಪ್ಪನವರ, ಶಿಕ್ಷಣಾಧಿಕಾರಿ ಉಮಾದೇವಿ, ಬಸಾಪೂರ.ಸಿ.ಪಿ.ಆಯ್ ಪ್ರಭು ಸೂರಿನ್, ಪಶುವೈದ್ಯಧಿಕಾರಿ ಸಮಾಜದ ಮುಖಂಡ ಮಹಾಂತೇಶ ತಹಶೀಲ್ದಾರ ಹಾಗೂ ರೈತ ಮುಖಂಡರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮ ದ ದಿವ್ಯ ಸಾನಿಧ್ಯವನ್ನು ಹನ್ನೆರಡು ಮಠದ ರೇವಣಸಿದ್ದ ಶಿವಾಚಾಯ್೯ ಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮ ವನ್ನು ಎಂ.ಎಂ.ಪುರದನಗೌಡ್ರ ನಿರೂಪಣೆ ಮಾಡಿದರು.

Edited By :
Kshetra Samachara

Kshetra Samachara

09/02/2022 02:07 pm

Cinque Terre

8.55 K

Cinque Terre

0

ಸಂಬಂಧಿತ ಸುದ್ದಿ