ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಸ್ವಾತಂತ್ರ್ಯೋತ್ಸವದ ಕಳೆಗಟ್ಟಿತ್ತು. ರಸ್ತೆ ಮೇಲೆಲ್ಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಕಂಗೊಳಿಸುತ್ತಿದ್ದವು ಇದಕ್ಕೆ ಮುಖ್ಯ ಕಾರಣ ಆಜಾದಿ ಕಾ ಅಮೃತ ಮಹೋತ್ಸವ.
ಹೌದು! ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದ ಹಿನ್ನೆಲೆಯಲ್ಲಿ ಹಾಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಧಾರವಾಡದ ಕಾರ್ಗಿಲ್ ಸ್ತೂಪದ ಬಳಿ ರಂಗೋಲಿಯಲ್ಲಿ ರಾಷ್ಟ್ರ ನಾಯಕರ ಹಾಗೂ ರಾಷ್ಟ್ರಪ್ರೇಮ ಬಿಂಬಿಸುವ ಚಿತ್ರಗಳನ್ನು ಬಿಡಿಸುವ ರಂಗೋಲಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನೇಕರು ತ್ರಿವರ್ಣ ಧ್ವಜದ ಚಿತ್ರ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ, ಇಂಡಿಯಾ ಗೇಟ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಸೇರಿದಂತೆ ಅನೇಕರ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಿ ಗಮನಸೆಳೆದರು.
ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಬಿಡಿಸಿದ ಸುಭಾಷಚಂದ್ರ ಬೋಸ್ ಅವರ ಚಿತ್ರ ಗಮನಸೆಳೆಯಿತು.
Kshetra Samachara
24/01/2022 06:50 pm