ಅಣ್ಣಿಗೇರಿ; ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾ ಅಣ್ಣಿಗೇರಿ ನಗರ ಘಟಕದ ವತಿಯಿಂದ ರವಿವಾರ ಸಾಯಂಕಾಲ ವೀರ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನೋತ್ಸವ ಹಾಗೂ ಪರಾಕ್ರಮ ದಿನದ ಪ್ರಯುಕ್ತ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ, ನಗರ ಘಟಕದ ಅಧ್ಯಕ್ಷ ಶಿವಾನಂದ ಹೊಸಳ್ಳಿ,ರಾಘವೇಂದ್ರ ರಾಮಗಿರಿ,ರಘು ಹಳ್ಳಿಕೇರಿ, ಸಿ.ಜಿ. ನಾವಳ್ಳಿ, ವಿಜಯ್ ಕಂಬಿ ಮಠ, ಮಹೇಶ್ ಸುಣಗಾರ್, ರಾಜು ಹಳ್ಳಿಕೇರಿ, ಶೋಭಾ ಗೊಲ್ಲರ್,ತವಣೆಶ್ ನಾವಳ್ಳಿ, ರೇಣುಕಾ ಕ್ಷತ್ರಿಯ, ಮಹೇಶ್ ಪಲ್ಯದ,ರೇಣವ್ವ ವಡ್ಡರ್,ಅನಸವ್ವ ವಡ್ಡರ ಹಾಗೂ ಬಿಜೆಪಿ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
23/01/2022 09:45 pm