ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಕಲಘಟಗಿ: ಕಲಘಟಗಿ ಪಟ್ಟಣದ ಗುಡನ್ಯೂಸ್ ವೆಲ್ಪರ್ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಲಘಟಗಿಯ ಕೃಷಿ ಇಲಾಖೆಯಲ್ಲಿ ಕೃಷಿ ನಿದೆ೯ಶಕರಾದ ಎನ್. ಎಸ್ ಕಟ್ಟೆಗೌಡರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರಾದ ಪ್ರೋ.ಹೊರಕೆರಿ , ಪ್ರೋ,ಎನ್ ಎಸ್ ಎಮ್ಮಿ, ಪ್ರೋ. ಅನಿತಾ ಭಟ್, ಪ್ರೋ. ಮುರುಗೊಡಮಟ, ಹಾಗೂ ರೆ. ಬ್ರದರ್ ನಿಜು ಥಾಮಸ್ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಬಿ. ಜಿ. ಬಿರಾದಾರ ಸರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ತಲೆ ತಗ್ಗಿಸಿ ನಿನ್ನ ಕೆಲಸ ಮಾಡಿದರೆ ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ ಎಂಬ ಸ್ವಾಮಿ ವಿವೇಕಾನಂದರ ಮಾತುಗಳಿಗೆ ಅನುಗುಣವಾಗಿ ಯುವಕರು ಮುಂದಿನ ಭವಿಷ್ಯ ರೂಪಿಸಲು ಪ್ರೇರೆಪಣೆಯ ಮಾತುಗಳನ್ನು ಪ್ರಾಚಾರ್ಯರಾದ ಬಿ ಜಿ ಬಿರಾದಾರ ಗುರುಗಳು ತಮ್ಮ ಅಧ್ಯಕ್ಷತೆ ನುಡಿಗಳನ್ನು ಮಾತನಾಡಿದರು.

ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮನರಂಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂಂದಿಗೆ ಸ್ವಾಮಿ ವಿವೇಕಾನಂದರನ್ನು ಸ್ಮರಿಸುತ್ತಾ ಕಾರ್ಯಕ್ರಮವನ್ನು ಆಚರಿಸಿದರು.

Edited By : Nagesh Gaonkar
Kshetra Samachara

Kshetra Samachara

13/01/2022 06:50 pm

Cinque Terre

49.26 K

Cinque Terre

1

ಸಂಬಂಧಿತ ಸುದ್ದಿ