ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ:ಅವರೆಲ್ಲ ಪಟ್ಟಣದ ಒತ್ತಡದ ಜೀವನದಲ್ಲಿ ಜೀವನ ನಡೆಸುವ ಸಿಟಿ ಜನರು. ಆದರೆ ಇಂದು ಮಾತ್ರ ಯಾವುದೇ ಹಳ್ಳಿಯ ಹೆಣ್ಣುಮಕ್ಕಳಿಗೂ ಕಡಿಮೆ ಇಲ್ಲ ಎನ್ನುವಂತೆ ಮಿಂಚುತ್ತಿದ್ದರೂ. ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಕಷ್ಟು ಸಂಭ್ರಮಿಸಿದ ಆ ಮಹಿಳೆಯರು ಶೀಗಿ ಹುಣ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಹುಬ್ಬಳ್ಳಿಯ ಶಾಂತಲಾ ಮಹಿಳಾ ಮಂಡಳಿಯ ಮಹಿಳೆಯರು ಶೀಗಿ ಹುಣ್ಣಿಮೆಯ ಅಂಗವಾಗಿ ಇಂದು ನೃಪತುಂಗ ಬೆಟ್ಟದಲ್ಲಿ ಶೀಗಿ ಹುಣ್ಣಿಮೆ ಆಚರಣೆ ಮಾಡಿದರು. ಹಸಿರು ಪಟ್ಟೆಯ ಸೀರೆ ತೋಪ ಸೆರುಗ ಮೇಲೆ ಮಾಡಿ ಎಂಬುವಂತ ಜಾನಪದ ಹಾಡಿನ ಬಂಡಿಯ ಮೂಲಕ ಮಹಿಳೆಯರು ಕುಣಿದು ಕುಪ್ಪಳಿಸಿದರು. ದಿನವೂ ಮನೆ ಕೆಲಸ, ಆಫೀಸ್ ಕೆಲಸದಲ್ಲಿ ಸಾಕಷ್ಟು ಮಾನಸಿಕ ಒತ್ತಡ ಅನುಭವಿಸಿದ್ದ ಮಹಿಳೆಯರು ಇಂದು ಒಟ್ಟುಗೂಡಿಕೊಂಡು ಅದ್ದೂರಿಯಾಗಿ ಶೀಗಿ ಹುಣ್ಣಿಮೆಯ ಆಚರಣೆ ಮಾಡಿದರು.
ಇನ್ನೂ ಮಹಿಳೆಯರು ಹಾಡುತ್ತಾ, ಕುಣಿಯುತ್ತ ಗೆಳತಿಯರೊಂದಿಗೆ ಸಂಭ್ರಮಿಸಿದರು. ಅಲ್ಲದೇ ಸಜ್ಜಿ ರೊಟ್ಟಿ, ಎಳ್ಳಿನ ಹೋಳಿಗೆ, ಕಡುಬು, ಕರಚಿಕಾಯಿ, ಹಪ್ಪಳ ಸಂಡಿಗೆ ಉಪ್ಪಿನಕಾಯಿಯ ಮೂಲಕ ತಮ್ಮ ಶೀಗಿ ಹುಣ್ಣಿಮೆಯ ಊಟವನ್ನು ಪೂರ್ಣಗೊಳಿಸಿ ಅದ್ದೂರಿಯಾಗಿ ಆಚರಣೆ ಮಾಡಿದರು.
ಒಟ್ಟಿನಲ್ಲಿ ಜಂಜಾಟದ ಬದುಕಿನಲ್ಲಿ ಜಟಕಾ ಬಂಡೆಯನ್ನು ಕಟ್ಟಿಕೊಂಡು ಹೊಲಕ್ಕೆ ಬಂದಂತೆ ಹುಬ್ಬಳ್ಳಿ ಮಹಿಳೆಯರು ಸಂಪ್ರದಾಯಿಕ ಆಚರಣೆ ಮೂಲಕ ನೃಪತುಂಗ ಬೆಟ್ಟದಲ್ಲಿ ಸಂಭ್ರಮಿಸಿದರು. ನಶಿಸಿ ಹೋಗುತ್ತಿರುವ ಆಚರಣೆಗಳು ಈ ರೀತಿಯಲ್ಲಿ ಆದರೂ ಮತ್ತೇ ಮುನ್ನೆಲೆಗೆ ಬರಲಿ ಎಂಬುವುದು ನಮ್ಮ ಆಶಯ..
Kshetra Samachara
26/10/2021 05:28 pm