ಕಲಘಟಗಿ:ಪಟ್ಟಣದ ಬಸವೇಶ್ವರ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ
ಗಣರಾಜ್ಯೋತ್ಸವದ ಅಂಗವಾಗಿ ಸಾಧಕರನ್ನು ಸನ್ಮಾನಿಸಲಾಯಿತು.
ಪಟ್ಟಣದ ಯುವಕ ಸುನೀಲ ಕಮ್ಮಾರ ಕಳೆದ ನಾಲ್ಕು ವರ್ಷಗಳಿಂದ ಗಣರಾಜ್ಯೋತ್ಸವದ ದಿನ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿದ್ದಾರೆ.ಈ ಬಾರಿ ವಲಯ ಅರಣ್ಯಾಧಿಕಾರಿಗಳಾದ ಶ್ರೀಕಾಂತ ಪಾಟೀಲ,ಜನಪದ ಕಲಾವಿದರಾದ ಮಲ್ಲಯ್ಯ ಗೋಡಿಮನಿ,ಸಾಹಿತಿ ಅಶೋಕ ಅರ್ಕಸಾಲಿ,ಅಗ್ನಿಶಾಮಕ ಠಾಣೆಯ ಯು ಎಸ್ ತಂಬದ ಹಾಗೂ ಪಟ್ಟಣ ಪಂಚಾಯತಿ ಪೌರ ಕಾರ್ಮಿಕ ರಾಮಣ್ಣ ಮಾಲೀನ್,ಪ್ರಗತಿಪರ ರೈತ ಮಹಿಳೆ ಸೌಮ್ಯ ನಾಯಕಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಆರ್ ಎಪ್ ಒ ಶ್ರೀಕಾಂತ ಪಾಟೀಲ ಮಾತನಾಡಿ,ಎಲೆಮರೆಯ ಕಾಯಿಯಂತೆ ಸಮಾಜದಲ್ಲಿ ಸೇವೆ ಮಾಡುವ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಸುನೀಲ ಕಮ್ಮಾರ ಅವರ ಕಾರ್ಯ ಶ್ಲಾಘನೀಯ ಎಂದರು.ಯುವ ಮುಖಂಡ ಸುನೀಲ ಕಮ್ಮಾರ,ಪಪಂ ಸದಸ್ಯ ನಾರಾಯಣ ವಾಗ್ಮೋಡೆ,ಎಸ್ ಡಿ ಎಂ ಸಿ ಅಧ್ಯಕ್ಷೆ ಸುಜಾತಾ ಗಣಾಚಾರಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
26/01/2021 04:24 pm