ಹುಬ್ಬಳ್ಳಿ: ಅವರೆಲ್ಲ ಕನ್ನಡ ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು.ಕೇವಲ ತಾವು ಕಲಿತ ಶಾಲೆಗೆ ಮಾತ್ರವಲ್ಲದೆ ಇನ್ನಿತರ ಶಾಲೆಗಳನ್ನು ಬೆಳೆಸುವ ಹಾಗೂ ವಿದ್ಯಾರ್ಥಿಗಳಿಗೆ ಆಕರ್ಷಕವಾಗಿ ಕಾಣುವಂತೆ ಮಾಡಲು ವಿನೂತನ ಪ್ರಯತ್ನವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಹಾಗಿದ್ದರೇ ಯಾರು ಆ ವಿದ್ಯಾರ್ಥಿಗಳು ಅವರು ಮಾಡುತ್ತಿರುವುದಾದರೂ ಎನು ಅಂತೀರಾ ಸ್ಟೋರಿ..
ಹೀಗೆ ಕೈಯಲ್ಲಿ ಬಣ್ಣದ ಕುಂಚ ಹಿಡಿದುಕೊಂಡು ಬಣ್ಣ ಬಳೆಯುತ್ತಿರುವ ಯುವಕರು. ಕಲರ್,ಕಲರ್ ಬಣ್ಣಗಳಿಂದ ಶಾಲೆಗೆ ಬಣ್ಣ ಹಚ್ಚುತ್ತಿರುವ ಉತ್ಸಾಹಿಗಳು ಇವರೆಲ್ಲ ಬಣ್ಣ ಹಚ್ಚುವ ಕಾರ್ಮಿಕರಂತೂ ಅಲ್ಲ.ಇವರೇ ಹಳೇ ವಿದ್ಯಾರ್ಥಿಗಳ ಸಂಘ ಹಳೇ ಹುಬ್ಬಳ್ಳಿಯ ಸಂಘಟನೆಯ ಪದಾಧಿಕಾರಿಗಳು. ಕನ್ನಡ ಶಾಲೆಯನ್ನು ಸುಂದರವಾಗಿಸುವ ಸದುದ್ದೇಶದಿಂದ ಶಾಲೆಗಳಿಗೆ ಬಣ್ಣ ಹಚ್ಚಿ ಸುಂದರ ಕಲಾಕೃತಿಗಳನ್ನು ರಚಿಸುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.ಈಗಾಗಲೇ ಹಳೇ ವಿದ್ಯಾರ್ಥಿಗಳ ಸಂಘದಿಂದ ಸುಮಾರು ಒಂಬತ್ತು ಶಾಲೆಗಳಿಗೆ ಬಣ್ಣ ಹಚ್ಚಿ ಅಲಂಕರಿಸುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ.ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ಕಣ್ಮನ ಸೆಳೆಯುವಂತೆ ಮಾಡಲು ಸ್ವಯಂಪ್ರೇರಿತರಾಗಿ ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.ಈ ಹಳೇ ವಿದ್ಯಾರ್ಥಿಗಳ ಸಂಘದಲ್ಲಿ ಪೊಲೀಸ್, ವೈದ್ಯರು, ಶಿಕ್ಷಕರು ಸೇರಿದಂತೆ ಸಮಾಜ ಸೇವೆ ಮನೋಭಾವದ ದೊಡ್ಡ ತಂಡವೇ ಈ ಸಂಘಟನೆಯಲ್ಲಿ ಕೈ ಜೋಡಿಸಿದೆ.
ಇನ್ನೂ ಕನ್ನಡ ಶಾಲೆಯ ಕುರಿತಾಗಿ ಜನರಲ್ಲಿದ್ದ ಕಿಳೆರೆಮೆಯನ್ನು ಹೊರದೂಡಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಕನ್ನಡ ಶಾಲೆಯಲ್ಲಿಯೇ ತಮ್ಮ ಮಕ್ಕಳನ್ನು ಓದಿಸುವಂತಾಗಲಿ ಎಂಬುವುದು ಹಳೇಯ ವಿದ್ಯಾರ್ಥಿಗಳ ಸಂಘದ ಆಶಯವಾಗಿದೆ.ಅಲ್ಲದೇ ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಇಮ್ಮಡಿಗೊಳಿಸಿ ಶಾಲೆಗಳ ಅಭಿವೃದ್ಧಿಯಾಗ ಬೇಕು ಎಂಬುವಂತ ಸದುದ್ದೇಶದಿಂದ ಹಳೇ ವಿದ್ಯಾರ್ಥಿಗಳ ಸಂಘ ಈ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.ಅಲ್ಲದೇ ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಬಹುತೇಕ ಶಾಲೆಗಳಿಗೆ ಬಣ್ಣ ಹಚ್ಚಿ ಶಾಲೆಗಳು ಬಣ್ಣ ಬಣ್ಣದಿಂದ ಕಂಗೊಳಿಸುವಂತೆ ಮಾಡಲು ಈ ವಿದ್ಯಾರ್ಥಿಗಳ ಸಂಘ ಕಾರಣವಾಗಿದೆ. ಇನ್ನೂ ಈ ಹಳೇಯ ವಿದ್ಯಾರ್ಥಿಗಳ ಕಾರ್ಯ ಮುಂಬರುವ ಪೀಳಿಗೆಗೆ ಉತ್ಸಾಹ ನೀಡುವುದಂತೂ ಸತ್ಯ.
ನಾವು ಕಲಿತ ಸರ್ಕಾರಿ ಮಾದರಿಯ ಶಾಲೆಗಳು ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡಿವೆ. ಅಲ್ಲದೇ ನಮ್ಮ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿ ನಮ್ಮ ಜೀವನವನ್ನು ಬಣ್ಣ ಬಣ್ಣದಿಂದ ಕಂಗೊಳಿಸುವಂತೆ ಮಾಡಿರುವ ಶಾಲೆಗಳು ಸದಾ ವರ್ಣರಂಜಿತವಾಗಿ ಕಂಗೊಳಿಸಲಿ ಎಂಬುವುದು ಹಳೇಯ ವಿದ್ಯಾರ್ಥಿಗಳ ಆಶಯವಾಗಿದ್ದು,ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡುವತ್ತ ಹಳೇಯ ವಿದ್ಯಾರ್ಥಿಗಳು ಬೆಳೆಯಲಿ ಎಂಬುವುದು ನಮ್ಮ ಆಶಯ...
Kshetra Samachara
21/01/2021 06:04 pm