ಕುಂದಗೋಳ : ಬಸವಾದಿ ಶರಣರ ಗರಡಿಯಲ್ಲಿ ಎಲ್ಲರು ಶರಣರೇ ಆದರೆ ನಿಜ ಶರಣ ಎಂದು ಕರೆಸಿಕೊಂಡುವರು ಮಿತ್ರ ನಿಜಶರಣ ಅಂಬಿಗರ ಚೌಡಯ್ಯನವರು ಮಾತ್ರ ಆ ಚೌಡಯ್ಯನವರ ವಚನ ಸಮಾಜಕಾಯಕ ಇಂದಿಗೂ ಶಾಶ್ವತ ಎಂದು ಪತ್ರಕರ್ತ ನೆನಪು ಪೌಂಡೇಶನ್ ಸಂಸ್ಥಾಪಕ ವಿರೇಶ ಪ್ರಳಯಕಲ್ಮಠ ಹೇಳಿದರು.
ಅವರು ಕುಂದಗೋಳ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಶರಣರ ಇತಿಹಾಸವನ್ನು ಸಾರಿ ಹೇಳಿದರು.
ತಹಶೀಲ್ದಾರ ಬಸವರಾಜ ಮೆಳವಂಕಿ ನೇತೃತ್ವದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿ 901ನೇ ಜಯಂತಿಯನ್ನು ಆಚರಿಸಲಾಯಿತು.
ಗಂಗಾಮತದ ಸಮಾಜದ ಕೆ.ಎಸ್.ವಾಯ್.ಜಿ.ಎಸ್ ಧಾರವಾಡ ಜಿಲ್ಲಾಧ್ಯಕ್ಷ ಗಣೇಶ ಬಾರಕೇರ್ ಹಾಗೂ ತಹಶೀಲ್ದಾರ ಕಚೇರಿ ಸಿಬ್ಬಂದಿಗಳು ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
21/01/2021 03:41 pm