ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಳ್ಳಿ ಶಾಲೆಗಳ ಕಲರಪುಲ್ ಕ್ರಾಂತಿಗೆ ರೆವುಲುಷನ್ ಮೈಂಡ್ಸ್ ಸಜ್ಜು

ಕುಂದಗೋಳ : ಮಕ್ಕಳಿಗೆ ಪೂರಕವಾದ ಶಿಕ್ಷಣ ನೀಡುವಲ್ಲಿ ಶಾಲೆಗಳ ಪಾತ್ರ ಬಹು ಮುಖ್ಯ, ಅಂತಹ ಗ್ರಾಮೀಣ ಶಾಲೆಗಳಿಗೆ ರಂಗು ರಂಗಿನ ಬಣ್ಣ ಬಳಿಯುವ ಕಾಯಕದ ನಿಸ್ವಾರ್ಥ ಸೇವೆಗೆ ರೆವುಲುವುಷನ್ ಮೈಂಡ್ಸ್ ತಯಾರಾಗಿ ತನ್ನ 37ನೇಯ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದೆ.

ಹೌದು ! ಮುಖ್ಯವಾಗಿ ಗ್ರಾಮೀಣ ಭಾಗಕ್ಕೆ ಒತ್ತು ಕೊಟ್ಟ ಯಂಗಸ್ಟರಗಳೇ ತುಂಬಿದ ಈ ರೆವುಲುಷನ್ ಮೈಂಡ್ಸ್ ಟೀಮ್ ರೊಟ್ಟಿಗವಾಡದ ಸರ್ಕಾರಿ ಶಾಲೆಗೆ ಸಂಪೂರ್ಣ ಬಣ್ಣ ಬಳಿದು ತಮ್ಮ ಸೇವೆ ನೀಡಿದೆ.

ಮೂಲತಃ ಹುಬ್ಬಳ್ಳಿ ನಗರದ ಕಾಲೇಜು ಸ್ನೇಹಿತರು ಒಡಗೂಡಿ ಕಟ್ಟಿಕೊಂಡಿರುವ ರೆವುಲುಷನ್ ಮೈಂಡ್ಸ್ ಟೀಮ್ ಕುಂದಗೋಳ ತಾಲೂಕಿನ ರೊಟ್ಟಿಗವಾಡದ ಶಾಲೆಗೆ ಬಣ್ಣ ಬಳಿದು ಸೇವೆ ಸಲ್ಲಿಸಿದೆ.

ಒಟ್ಟಾರೆ ಇಡೀ ಧಾರವಾಡ ಜಿಲ್ಲೆ ಹಿಂದುಳಿದ ಹಳ್ಳಿಗಳನ್ನೇ ಗುರಿಯಾಗಿಸಿ ಕಲರಪುಲ್ ಕ್ರಾಂತಿಗೆ ಸಜ್ಜಾದ ರೆವುಲುಷನ್ ಮೈಂಡ್ಸ್ ಸಂಸ್ಥಾಪಕ ವಿನಾಯಕ ಜೋಗಾರಿಶೆಟ್ಟರ್ ಕಾರ್ಯಕ್ಕೆ ಗ್ರಾಮೀಣ ಜನತೆ ಸೈ ಎಂದಿದೆ.

Edited By : Nagesh Gaonkar
Kshetra Samachara

Kshetra Samachara

20/01/2021 10:40 am

Cinque Terre

57.29 K

Cinque Terre

4

ಸಂಬಂಧಿತ ಸುದ್ದಿ