ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಂಧ ಅನಾಥರ ಎಳ್ಗೆಗಾಗಿ ಬಣ್ಣ ಹಚ್ಚಿದೆ ಗದುಗಿನ ನಾಟ್ಯ ಸಂಘ !

ಕುಂದಗೋಳ : ಆಧುನಿಕ ಕಾಲ ಘಟ್ಟದಲ್ಲಿ ಗ್ರಾಫಿಕ್ಸ್ ಸಿನಿಮಾ ಮೋಡಿಗೆ ಜನ ಮರುಳಾಗಿ ನಾಟಕ ರಂಗಭೂಮಿ ಪ್ರತಿಭೆಗಳೇ ಕಾಣದ ಈ ದಿನಗಳಲ್ಲಿ ಇಲ್ಲೋಂದು ನಾಟ್ಯ ಸಂಘ ನಿತ್ಯ ನಾಟಕ ಕಾರ್ಯಕ್ರಮ ನೀಡುತ್ತಾ ಕುಂದಗೋಳ ತಾಲೂಕಿನಲ್ಲೇ ಹೆಸರಾಗಿದೆ.

ಹೌದು ! ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಕೊರೊನಾ ಪೂರ್ವದಲ್ಲೇ ಆಗಮಿಸಿ ಲಾಕ್ ಡೌನ್ ಹೊಡೆತಕ್ಕೆ ಪರದೆ ಎಳೆದಿದ್ದ ಗದುಗಿನ ಪಂಡಿತ್ ಗವಾಯಿಗಳವರ ನಾಟ್ಯ ಸಂಘ ಅಂಧ ಅನಾಥ ಮಕ್ಕಳ ಬದುಕಿಗಾಗಿ ಮತ್ತೆ ಬಣ್ಣ ಹಚ್ಚಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈಗಾಗಲೇ ಮಹಾ ಶಿವಶರಣೆ ಅಕ್ಕಮಹಾದೇವಿ ನಾಟಕವನ್ನು ಯಶಸ್ವಿ 70 ಪ್ರದರ್ಶನಗಳನ್ನ ಮುಗಿಸಿರುವ ಕಲಾ ತಂಡ ''ಬಂಜೆಯ ತೊಟ್ಟಿಲು ಅರ್ಥಾತ್ ಶೆಟ್ಟಿಯ ಹಾರಾಟ ಸಂಗವ್ವನ ಚೆಲ್ಲಾಟ್'' ನಾಟಕ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ ನಿತ್ಯ ಅಭಿನಯದ ರಸ ದೌತನವನನ್ನು ಗ್ರಾಮೀಣ ಜನರಿಗೆ ಉಣ ಬಡಿಸುತ್ತಿದೆ. ಈ ಬಗ್ಗೆ ನಾಟಕ ಸಹ ಕಲಾವಿದರ ಮಾತೇನು ಕೇಳ್ಬೇಡಿ.

ಸತತ ಹತ್ತು ತಿಂಗಳಿನಿಂದ ಸಂಶಿ ಗ್ರಾಮದಲ್ಲಿ ಬಿಡು ಬಿಟ್ಟಿರುವ ನಾಟ್ಯ ಸಂಘದಲ್ಲಿ ಹಿರಿಯ ಕಲಾವಿದರು, ವಯಸ್ಕರರ ಜೊತೆ ಸ್ತ್ರೀ ಪಾತ್ರದಲ್ಲಿ ಪುರುಷ ಕಲಾವಿದರೂ ಅಭಿನಯಿಸಿ ಜನರನ್ನು ಮೋಡಿ ಮಾಡಿದ್ದಾರೆ, 70 ವಯಸ್ಸಿನ ವೃದ್ಧರು ಈ ನಾಟ್ಯ ಸಂಘದಲ್ಲಿ ಅಭಿನಯ ಮಾಡುತ್ತಿರುವುದು ವಿಶೇಷವೇ ಸರಿ.

ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ನಿತ್ಯ ಒಂದು ನಾಟಕ ಹಾಗೂ ಶನಿವಾರ ಭಾನುವಾರ ನಿತ್ಯ ಎರೆಡು ನಾಟಕ ಪ್ರದರ್ಶನ ಮಾಡುವ ಕಲಾವಿದರಿಗೆ ಸಂಶಿ ಗ್ರಾಮಸ್ಥರು ಅಷ್ಟೇ ಅಲ್ಲದೆ ಸುತ್ತ ಮುತ್ತಲಿನ ಹಳ್ಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹಿಳೆಯರು ಮಕ್ಕಳು ವಯಸ್ಸಿನ ಭೇದವಿಲ್ಲದೆ ಕುಟುಂಬಸ್ಥರು ನಾಟಕ ನೋಡಿ ಕಲಾವಿದರಿಗೆ ಬೆಂಬಲಿಸಿದ್ದಾರೆ.

ಒಟ್ಟಾರೆ ಕೊರೊನಾ ಸಂದರ್ಭದಲ್ಲಿ ನಾನಾ ಕಷ್ಟ ಎದುರಿಸಿದ ಪಂಡಿತ್ ಗವಾಯಿಗಳವರ ನಾಟ್ಯ ಸಂಘ ಸದ್ಯ ಅಭಿನಯದ ವೇಗದಲ್ಲಿ

ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾದ್ರೆ. ಈ ನಾಟಕದ ಕಲಾವಿದರು ತಮ್ಮ ಕುಟುಂಬ ತಮ್ಮ ಮನೆ ಬದಲಾಗಿ ಗದುಗಿನ ಆಶ್ರಮದ ಅಂಧ ಅನಾಥ ಮಕ್ಕಳಾಗಿ ಈ ರೀತಿ ಸೇವೆಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.

ಈ ನಾವು ನೀವು ಎಲ್ಲೋ ಕೂತು ಸಿನಿಮಾ ವೀಕ್ಷಿಸುವ ಬದಲಾಗಿ ಪರೋಪಕಾರಕ್ಕಾಗಿ ದುಡಿಯುವ ಈ ನಾಟಕದ ಎಡೆಗೆ ವಾಲಿದ್ರೇ ಬಡ ಮಕ್ಕಳ ಸೇವೆಗೆ ಸಹಾಯ ನೀಡಿದಂತೆಯೇ ಸರಿ.

Edited By : Nagesh Gaonkar
Kshetra Samachara

Kshetra Samachara

17/01/2021 03:09 pm

Cinque Terre

66.85 K

Cinque Terre

3

ಸಂಬಂಧಿತ ಸುದ್ದಿ