ಹುಬ್ಬಳ್ಳಿ: ದಸರಾ ನವರಾತ್ರಿ ಹಬ್ಬದ ಅಂಗವಾಗಿ ನಾಡಿನಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ. ಅದೇ ರೀತಿಯಾಗಿ ಹುಬ್ಬಳ್ಳಿ ತಾಲ್ಲೂಕಿನ ಕುಸಗಲ್ ಗ್ರಾಮದ ಮಾರುತಿ ನಗರದಲ್ಲಿ, ಶ್ರೀ ಜಗದ್ಗುರು ಸಿದ್ಧಾರೂಢರ ಮಠದ ಉತ್ತರಾಧಿಕಾರಿ ರಮಾನಂದ ಸ್ವಾಮೀಜಿ ಅವರು ದೇವಿಗೆ ಪೂಜೆ ಸಲ್ಲಿಸಿ ಪ್ರವಚನ ಮಾಡುವುದರ ಮೂಲಕ ಅದ್ಧೂರಿಯಾಗಿ ಆಚರಣೆ ಮಾಡಿದರು.
ದಸರಾ ಹಬ್ಬದ ನಿಮಿತ್ತ ಹತ್ತು ದಿನಗಳ ಕಾಲ ಕುಸುಗಲ್ ಗ್ರಾಮದ ಮಾರುತಿ ಮಂದಿರದಲ್ಲಿ, ಗ್ರಾಮಾದಿದೇವ ಅತುಲಿತ ಬಲಧಾಮ ಶ್ರೀ ಆಂಜನೇಯ ದೇವಸ್ಥಾನದಲ್ಲಿ, ನವರಾತ್ರಿಯ ಲೋಕ ಕಲ್ಯಾಣಕ್ಕಾಗಿ ಶ್ರೀದೇವಿ ಮಹಾ ಪುರಾಣವನ್ನು ಸಿದ್ಧಾರೂಡ ಮಠದ ಪೀಠಾಧಿಪತಿ ಶ್ರೀ ಪರಮಪೂಜ್ಯ ಶ್ರೀರಾಮಾನಂದ ಮಹಾಸ್ವಾಮಿಗಳು ಪ್ರವಚನ ಮಾಡುವುದರ ಜೊತೆಗೆ ದೇವರು ಎಲ್ಲಿದ್ದಾನೆ, ಎಂಬುದನ್ನ ತಮ್ಮ ಪ್ರವಚನ ಮೂಲಕ ತಿಳಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಇಲ್ಲಿನ ನಗರದ ನಿವಾಸಿಗಳು ಮುತೈದಿಯರಿಗೆ ಉಡಿ ತುಂಬವ ಕಾರ್ಯ ಮಾಡಿದರು. ಪ್ರವಚನ ನಿಮಿತ್ತ ಭಕ್ತರ ಅನುಗುಣವಾಗಿ ಅನ್ನಸಂತರ್ಪಣೆ ಸಹ ಹಮ್ಮಿಕೊಳ್ಳಲಾಗಿತ್ತು.
ಪ್ರವಚನ ಕಾರ್ಯಕ್ರಮದಲ್ಲಿ ಕುಸುಗಲ್ ಗ್ರಾಮದ ಸಮಸ್ತ ಗುರುಹಿರಿಯರು ಹಾಗೂ ಮಾರುತಿ ನಗರದ ಸಮಸ್ತ ಸದ್ಭಕ್ತರು ಭಾಗವಹಿಸಿ ಶ್ರೀ ದುರ್ಗಾದೇವಿಯ ಕೃಪೆಗೆ ಪಾತ್ರರಾದರು. ಇದೆ ಸಂದರ್ಭದಲ್ಲಿ ಪ್ರವಚನ ನೀಡಿದ ಸ್ವಾಮೀಜಿ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
Kshetra Samachara
05/10/2022 11:37 am