ಕುಂದಗೋಳ : ಶರನ್ನವರಾತ್ರಿ ಪೂಜೆ ಆರಾಧನೆ ಅಂದ್ರೇ ಅದರಲ್ಲಿ ಸಂತ ಶಿಶುನಾಳ ಶರೀಫರಿಗೆ ಮೂಗುತಿ ನೀಡಿದ ಗುಡಗೇರಿ ದ್ಯಾಮವ್ವದೇವಿ ಹಾಗೂ ದೇವಸ್ಥಾನ ವಿಶೇಷವೇ ಸರಿ.
ಹೌದು ! ಈಗಾಗಲೇ ನವರಾತ್ರಿ ಆರಾಧನೆ ಆರಂಭವಾಗಿದ್ದು, ನಿತ್ಯ ಒಂದಿಲ್ಲೋಂದು ಒಂದು ವಿಶಿಷ್ಟ ಅಲಂಕಾರ ಪೂಜೆ ಪುನಸ್ಕಾರಗಳ ಮೂಲಕ ತಾಯಿ ದ್ಯಾಮವ್ವ ಭಕ್ತರಿಗೆ ದರ್ಶನ ನೀಡುತ್ತಲಿದ್ದು, ದೇವಸ್ಥಾನ ವರ್ಣರಂಜೀತ ದೀಪಗಳ ಅಲಂಕಾರಗಳ ಮದ್ಯೆ ಕಂಗೋಳಿಸುತ್ತಿದೆ.
ಅದರಂತೆ ತಾಯಿ ದ್ಯಾಮವ್ವದೇವಿ ನಿಂಬೆ ಹಣ್ಣಿನ ಹಾರಗಳು ನಡುವೆ ವಿರಾಜಮಾನವಾದ ಪೂಜೆಯ ಶೋಭೆ ತೊಟ್ಟು ಭಕ್ತ ಜನತೆಗೆ ಆರ್ಶಿವಾದ ನೀಡುತ್ತಲಿದ್ದು, ನಿತ್ಯ ಕುಂದಗೋಳ ತಾಲೂಕಿನ ಸಮಸ್ತ ಹಳ್ಳಿಗರು ಗುಡಗೇರಿ ಆಗಮಿಸಿ ದೇವಿಯ ಕೃಪಾಕಟಾಕ್ಷಕ್ಕೆ ಪ್ರಾಪ್ತರಾಗುತ್ತಿದ್ದು ಡೊಳ್ಳು ಮೇಳಗಳ ನಡುವೆ ನಿತ್ಯವೂ ಬಣ್ಣಿಮಹಾಕಾಳಿ ದೇವಸ್ಥಾನದ ಸುತ್ತ ಪಲ್ಲಕ್ಕಿ ಸೇವೆ ನಡೆದೆ ಇದೆ.
ಇನ್ನೂ ವಿಶೇಷ ಎಂದ್ರೇ ತಾಯಿ ದ್ಯಾಮವ್ವದೇವಿ ಆಸ್ಥಾನಕ್ಕೆ ಆಗಮಿಸಿದ ಮುಕ್ತಿಮಂದಿರದ ಐರಾವತ ತನ್ನ ಬಲ ಕಿವಿಯನ್ನು ಸೊಂಡಿಲಿನಿಂದ ಹಿಡಿದುಕೊಂಡು ಬಣ್ಣಿ ಮಹಾಕಾಳಿ ದೇವಸ್ಥಾನ ಸುತ್ತು ಹಾಕಿ ತನ್ನ ಭಕ್ತಿ ಸೇವೆಯನ್ನು ತಾಯಿಗೆ ಸಮರ್ಪಿಸಿದೆ.
ಒಟ್ಟಾರೆ ಅನ್ನಸಂತರ್ಪಣೆ ಪೂಜಾ ಕಾರ್ಯಕ್ರಮಗಳ ನಡುವೆ ದ್ಯಾಮವ್ವ ದೇವಿ ಲೋಕದ ಉದ್ಧಾರಕ್ಕಾಗಿ ಭಕ್ತರನ್ನು ಹರಿಸುತ್ತಿದ್ದಾಳೆ.
Kshetra Samachara
02/10/2022 04:32 pm