ನವಲಗುಂದ : ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಶ್ರಾವಣ ಮಾಸದ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಹಲವು ವಾದ್ಯಗಳೊಂದಿಗೆ ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ರೇವಣಶಿದ್ದೇಶ್ವರ ಭಜನಾ ಮಂಡಳಿ ಬೆಳವಟಗಿ ವತಿಯಿಂದ ಸಂಪೂರ್ಣ ಗ್ರಾಮದಲ್ಲಿ ಡೊಳ್ಳು, ತಮಟೆ ಸೇರಿದಂತೆ ಹಲವು ವಾದ್ಯಗಳೊಂದಿಗೆ ಗ್ರಾಮಸ್ಥರು ಬೃಹತ್ ಮೆರವಣಿಗೆಯನ್ನು ನಡೆಸಿದರು. ಇನ್ನು ಭಜನಾ ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು ಹಿರಿಯರು ಸೇರಿದಂತೆ ಎಲ್ಲರೂ ಸಹ ಸಂತಸದಿಂದ ಭಾಗಿಯಾಗಿದ್ದರು.
Kshetra Samachara
29/08/2022 08:00 am