ನವಲಗುಂದ : ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಶ್ರೀ ಬಸವಣ್ಣ ದೇವರ ರಥೋತ್ಸವವು ಗ್ರಾಮದಲ್ಲಿ ಬಹು ಅದ್ದೂರಿಯಿಂದ ನೆರವೇರಿತು. ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನೆರವೇರಿದ ರಥೋತ್ಸವದಲ್ಲಿ ವಾದ್ಯಗಳು ಕನ್ಮನ ಸೆಳೆದವು.
ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಧಾರವಾಡ ಇವರ ಸಂಯೋಗದಲ್ಲಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಶ್ರೀ ಬಸವಣ್ಣ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ದಿವ್ಯ ಸಾನಿಧ್ಯವನ್ನು ಪಂಚಾಕ್ಷರಯ್ಯ ಸ್ವಾಮಿ ಶಿವಪೂಜಿ ಮಠ ಮತ್ತು ಮುತ್ತಯ್ಯ ಗಂಗಾಧರ ಮಠ ವಹಿಸಿಕೊಂಡಿದ್ದರು.
ರಥೋತ್ಸವದ ಸಂದರ್ಭದಲ್ಲಿ ಪ್ರಮುಖ ಆಕರ್ಷಣ ಬಿಂದುವಾಗಿದ್ದು, ಮಹಿಳಾ ಮಣಿಗಳಿಂದ ಹೊರಬಂದ ವಾದ್ಯಗಳನಾದ. ಹೌದು ಮಹಿಳೆಯರು ಅತಿ ಸಂಭ್ರಮದಿಂದ ಡೊಳ್ಳು ತಮಟೆ ಸೇರಿದಂತೆ ಹಲವು ವಾದ್ಯಗಳನ್ನು ಬಾರಿಸಿ, ಸಂಭ್ರಮಿಸಿದರು. ಈ ವೇಳೆ ಬಂದಂತ ಸಾವಿರಾರು ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಇಷ್ಟಾರ್ಥಗಳನ್ನು ಬೇಡಿಕೊಂಡರು.
Kshetra Samachara
28/08/2022 01:32 pm