ನವಲಗುಂದ : ಕಳೆದ ಒಂದು ತಿಂಗಳಿನಿಂದ ನವಲಗುಂದ ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ನಡೆದ ಶ್ರೀ ಸಿಧ್ದಾರೋಡ ಪುರಾಣ ಕಾರ್ಯಕ್ರಮ ಶುಕ್ರವಾರ ಮುಕ್ತಾಯಗೊಂಡಿದ್ದು, ಈ ನಿಮಿತ್ತ ಗ್ರಾಮದಲ್ಲಿ ಜಾತ್ರೆಯ ಸಡಗರ ಸೃಷ್ಟಿಯಾಗಿತ್ತು.
ಗ್ರಾಮದ ಶ್ರೀ ಚಿಕ್ಕಮಠದಲ್ಲಿ ಒಂದು ತಿಂಗಳು ನಡೆದ ಶ್ರೀ ಸಿಧ್ದಾರೋಡ ಪುರಾಣವನ್ನು ಶರಣಯ್ಯಾ ಹಿರೇಮಠ ಅವರು ನಡೆಸಿಕೊಟ್ಟರು. ತಿಂಗಳುಗಳ ಕಾಲ ಗ್ರಾಮ ಸೇರಿದಂತೆ ಹಲವೆಡೆಯಿಂದ ಭಕ್ತರ ಆಗಮನವಿತ್ತು.
ಇಂದು ಅಂತ್ಯಗೊಂಡ ಪ್ರಯುಕ್ತ ಮಠದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಂಗಳೆಯರು ಕುಂಭ ಹೊತ್ತು ಸಂಭ್ರಮಿಸಿದರು. ಅದರೊಂದಿಗೆ ಡೊಳ್ಳು, ಭಜನೆ, ಜಾಂಜ್ ಸೇರಿದಂತೆ ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು.
Kshetra Samachara
26/08/2022 07:49 pm