ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಮಳೆಯಲ್ಲೂ ಮೊಹರಂ ಸಂಭ್ರಮ

ಅಳ್ನಾವರ: ತಾಲೂಕಿನಾದ್ಯಂತ ಇಂದು ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಇದೊಂದು ಧಾರ್ಮಿಕ ಸಾಮರಸ್ಯದ ಹಬ್ಬವಾಗಿದ್ದು, ಹಿಂದೂ, ಮುಸ್ಲಿಂ ಕೂಡಿ ಆಚರಿಸುವುದು ವಿಶೇಷವಾಗಿದೆ.

ಮೊಹರಂ ಹಬ್ಬವನ್ನು ಎರಡು ಧರ್ಮಿಯರು ಕೂಡಿಕೊಂಡು ಆಚರಣೆ ಮಾಡುತ್ತಾ ಬಂದಿದ್ದಾರೆ. ಈ ಹಬ್ಬದಲ್ಲಿ ಮುಸ್ಲಿಮರು ಹಾಗೂ ಹಿಂದುಗಳು ಹುಲಿವೇಷ ಹಾಕಿಕೊಂಡು ಕುಣಿಯುವುದು ವಿಶೇಷ. ಜೊತೆಗೆ ಆಲೆದೇವರ ಪಂಜಿನ ಮೆರೆವಣಿಗೆ ನಡೆಸಲಾಗುತ್ತೆ. ಜಾತಿ, ಭೇದವಿಲ್ಲದೆ ಎಲ್ಲರೂ ಮಸೀದಿಗೆ ಹೋಗಿ ಪೂಜೆ ಸಲ್ಲಿಸಿಕೊಂಡು ಬರುತ್ತಾರೆ.

ರಾಜ್ಯದ ಅನೇಕ ಗ್ರಾಮಗಳಲ್ಲಿ ಮುಸ್ಲಿಮರು ಇಲ್ಲ. ಹೀಗಿದ್ದರೂ ಅಲ್ಲಿ ಮೊಹರಂ ಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತೆ. ಹೀಗಾಗಿ ಇದೊಂದು ಎಲ್ಲರನ್ನು ಬೆಸೆಯುವ ಹಬ್ಬ ಎನ್ನಲಾಗುತ್ತೆ. ತಾಲೂಕಿನೆಲ್ಲೆಡೆ ಜೋರು ಮಳೆ ಇದ್ದರು ಮೊಹರಂ ಆಚರಣೆಗೆ ಮಾತ್ರ ಕೊರತೆ ಇರಲಿಲ್ಲ. ಮಕ್ಕಳು, ಗೃಹನೀಯರು, ಯುವಕರು ಎಲ್ಲರೂ ಡೋಲಿಗಳ ಮೆರವಣಿಗೆಯಲ್ಲಿ ಭಾಗವಹಿಸಿ ಮೊಹರಂ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು.

ಮಹಾಂತೇಶ ಪಠಾಣಿ

ಪಬ್ಲಿಕ್ ನೆಕ್ಸ್ಟ್ ಅಳ್ನಾವರ.

Edited By : Somashekar
Kshetra Samachara

Kshetra Samachara

09/08/2022 07:17 pm

Cinque Terre

27.06 K

Cinque Terre

0

ಸಂಬಂಧಿತ ಸುದ್ದಿ