ಹುಬ್ಬಳ್ಳಿ: ನಗರ ಹಾಗೂ ಹಳ್ಳಿ ಹಳ್ಳಿಗಳಲ್ಲೂ ಮೊಹರಂ ಹಬ್ಬವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಹಾಗೂ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಐತಿಹಾಸಿಕ ಹಬ್ಬ ಇದಾಗಿದೆ.
ಹೌದು, ಈ ಮೋಹರಂ ಹಬ್ಬವು ಬೇಧ-ಭಾವವಿಲ್ಲದೇ ಆಚರಿಸುವ ಹಬ್ಬವಾಗಿದೆ. ಈ ಸಡಗರದಲ್ಲಿ ಹೆಜ್ಜೆ ಕುಣಿತ, ರಿವಾಯತ್ ಪದಗಳು ಹಾಡುವುದು ಹಾಗೂ ಹುಲಿ ಕುಣಿತಗಳು ನೋಡುಗರನ್ನು ಗಮನ ಸೆಳೆಯುವಂತಾಗಿದೆ.
ಅಂತಹ ಹುಲಿ ವೇಷದ ಬಣ್ಣವನ್ನು ಹಲವಾರು ಕಲಾವಿದರು ಹಚ್ಚುತ್ತಾರೆ. ಆ ಪೈಕಿ ಹುಬ್ಬಳ್ಳಿಯ ಬಮ್ಮಾಪೂರ ಓಣಿಯ ಕಲಾವಿದರಾದ ಕಾಂಬ್ಳೆ ಮನೆತನದವರು ಸುಮಾರು ವರ್ಷಗಳಿಂದ ಭಕ್ತಿಪೂರ್ವಕವಾಗಿ ಹುಲಿ ವೇಷಧಾರಿಗಳಿಗೆ ಬಣ್ಣ ಬಳಿಯುವ ಕಾಯಕ ಮಾಡುತ್ತಾ ಬಂದಿದ್ದು ಶ್ಲಾಘನೀಯವಾಗಿದೆ.
ಹುಲಿ ವೇಷ ಧರಿಸುವವರು ಯುವಕರಲ್ಲದೇ, ಬಾಲಕರು ಸಹಿತ ದೇವರಿಗೆ ಹರಕೆ ಹೊತ್ತು, ಇಷ್ಟಾರ್ಥ ಈಡೇರಿದ ನಂತರ ಹುಲಿ ವೇಷ ಧರಿಸಿ ಹರಕೆ ತೀರಿಸುತ್ತಾರೆ. ಹೀಗೆ ಹುಲಿ ವೇಷಧಾರಿಗಳು ಹಳ್ಳಿ,ಗರದಲ್ಲಿ ಸಂಚರಿಸಿ ಕುಣಿಯುತ್ತಾ ನೃತ್ಯ ಪ್ರದರ್ಶನ ಮಾಡುತ್ತಾರೆ. ಹುಲಿ ನೃತ್ಯ ಪ್ರದರ್ಶನ ಮಾಡುವುದನ್ನು ನೋಡಿ ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬವಾಗಿರುತ್ತದೆ.
ಮೊಹರಂ ಹಬ್ಬ ಸುಮಾರು 5 ದಿನಗಳವರೆಗೆ ನಡೆಯುವ ಹಬ್ಬವಾಗಿದೆ. ಇಂದು "ಕತ್ತಲ್ ರಾತ್ರಿ" ಇದ್ದು, ನಾಳೆ ಮೊಹರಂ ಹಬ್ಬದ ಕೊನೆಯ ದಿನವಾಗಿದೆ. ಮುಸ್ಲಿಂ ಬಾಂಧವರು ತಮ್ಮ ದೇವರುಗಳನ್ನು ದುಃಖದಿಂದ ಕಳಿಸಿಕೊಡುವುದ ಈ ಹಿಂದಿನಿಂದ ನಡೆದುಕೊಂಡು ಬಂದಿದೆ.
Kshetra Samachara
08/08/2022 06:10 pm