ನವಲಗುಂದ : ಐದು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜರುಗುವ ನವಲಗುಂದದ ನಗರದ ಭಜಂತ್ರಿ ಓಣಿಯ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ನಗರದಲ್ಲಿ ಮೆರವಣಿಗೆ ಮೂಲಕ ಹೆಂಗಳೆಯರು ಕುಂಭ ಹೊತ್ತು ಸಂಭ್ರಮ ಪಟ್ಟರು.
ಮೆರವಣಿಗೆಯ ಸಡಗರದಲ್ಲಿ ವಾದ್ಯಮೇಳದೊಂದಿಗೆ ಯುವಕರು ಆರ್ಕೆಸ್ಟ್ರಾ ಎದುರು ಕುಣಿದು ಕುಪ್ಪಳಿಸಿದರು. ಐವತ್ತುಕ್ಕೂ ಅಧಿಕ ಹೆಂಗಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾದರು.
ಇನ್ನು ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ಹಾಗೂ ಶುಕ್ರವಾರ ಪಟ್ಟಣದ ನೂಲಿಚಂದಯ್ಯ ಸಮುದಾಯ ಭವನದಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಹಲವು ಗಣ್ಯರು ಭಾಗಿಯಾಗಲಿದ್ದಾರೆ.
Kshetra Samachara
14/07/2022 05:56 pm