ಕುಂದಗೋಳ: ಡೊಳ್ಳು ಮೇಳಗಳ ಮೆರವಣಿಗೆ, ಕೋಲಾಟದ ಸದ್ದು, ಪೂರ್ಣ ಕುಂಭ ಕೊಡಗಳನ್ನು ಹೊತ್ತ ಮಹಿಳೆಯರ ನಡುವೆ ಮಾರುತಿ ಬಸವೇಶ್ವರ ರಥೋತ್ಸವದ ಕಳಸದ ಮೆರವಣಿಗೆ ಗುಡೇನಕಟ್ಟಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹೌದು! ಆರ್ಕೆಸ್ಟ್ರಾ ಹಾಡುಗಳ ನಡುವೆ ಕಳಸದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗುಡೇನಕಟ್ಟಿ ಗ್ರಾಮದ ಹಿರಿಯರು ಭಾಗವಹಿಸಿ ಜಾತ್ರಾ ಸೊಬಗನ್ನು ಆನಂದಿಸಿ ಮಾರುತಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ ಕೈಗೊಂಡರು.
ಜಾತ್ರೆಯ ಅಂಗವಾಗಿ ಇಂದು ಬೆಳಿಗ್ಗೆ ಮಾರುತಿ ಬಸವೇಶ್ವರ ಮೂರ್ತಿಗಳಿಗೆ ವಿಶೇಷ ಪೂಜಾಭಿಷೇಕ ಕೈಗೊಳ್ಳಲಾಗಿದ್ದು, ನವಗ್ರಹ ಪೂಜೆ ಹಾಗೂ ಹೋಮ-ಹವನ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.
Kshetra Samachara
13/05/2022 06:25 pm