ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಲಕೇರಿ ಗ್ರಾಮದಲ್ಲಿ ಕಳೆಗಟ್ಟಿದ ಗ್ರಾಮದೇವಿಯರ ಜಾತ್ರೆ

ಧಾರವಾಡ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗ್ರಾಮದೇವಿಯರಾದ ದ್ಯಾಮವ್ವ ಹಾಗೂ ದುರ್ಗಾದೇವಿಯ ಜಾತ್ರಾ ಮಹೋತ್ಸವು ಅದ್ಧೂರಿಯಾಗಿ ಜರುಗುತ್ತಿದ್ದು ನಾಲ್ಕು ದಿನಗಳಿಂದ ವಿವಿಧ ಧಾರ್ಮಿಕ ಆಚರಣೆ ಹಾಗೂ ಪೂಜಾ ವಿಧಿ ವಿಧಾನಗಳನ್ನು ಭಕ್ತಾದಿಗಳು ನೆರವೇರಿಸುತ್ತಿದ್ದಾರೆ.

ಮಂಗಳವಾರದಿಂದ ಜಾತ್ರೆಗೆ ಚಾಲನೆ ದೊರೆತಿದ್ದು ಹೋಮ, ಹವನ ಸೇರಿದಂತೆ ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನದ ಕಟ್ಟೆಗೆ ದೇವಿಯರ ಪ್ರತಿಷ್ಠಾಪನೆ ಮಾಡಿ ಸಂಭ್ರಮ ಸಡಗರದಿಂದ ಜಾತ್ರಾ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ.

ಕಲಕೇರಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಸಡಗರ ಸಂಭ್ರಮ ಕಳೆಗಟ್ಟಿದ್ದು ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಜನ ಸಾಗರವೇ ಹರಿದು ಬಂದಿರುವ ದೃಶ್ಯಗಳು ಕಂಡು ಬಂದವು.

Edited By : Manjunath H D
Kshetra Samachara

Kshetra Samachara

26/04/2022 11:07 pm

Cinque Terre

21.25 K

Cinque Terre

0

ಸಂಬಂಧಿತ ಸುದ್ದಿ