ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಶ್ರೀ 1008 ಶಾಂತಿನಾಥ ಜೈನ ಮಂದಿರದಲ್ಲಿ ಭಗವಾನ್ ಶ್ರೀ ಮಹಾವೀರ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಮಹಾವೀರರ ಜಯಂತಿ ಅಂಗವಾಗಿ ಮಹಾವೀರ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಬಳಿಕ ಸಕಲ ವಾದ್ಯಗಳೊಂದಿಗೆ ಶ್ರೀ ಭಗವಾನ್ ಮಹಾವೀರ ತೀರ್ಥಂಕರರ ಭಾವಚಿತ್ರವನ್ನು ಕುಂಭಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.
ಮಹಾವೀರ ತೀರ್ಥಂಕರರಿಗೆ ನಾಮಕರಣ ನಾಮಕರಣ ಹಾಗೂ ತೊಟ್ಟಿಲೋತ್ಸವ ವಿಶೇಷವಾಗಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಜೈನ ಸಮುದಾಯದವರು ಅನ್ನಸಂತರ್ಪಣೆ ಜರಗಿಸಿದರು, ಜೈನ ಸಮಾಜದ ಎಲ್ಲ ಶ್ರಾವಕ ಶ್ರಾವಕಿಯರು ಭಾಗವಹಿಸಿ ಭಗವಾನ್ ಮಹಾವೀರ ತೀರ್ಥಂಕರರ ದರ್ಶನ ಪಡೆದು ಕೊಂಡರು.
Kshetra Samachara
14/04/2022 08:17 pm