ಅಳ್ನಾವರ: ಅಳ್ನಾವರ ತಾಲೂಕಿನ ಅರವಟಗಿ ಗ್ರಾಮದಲ್ಲಿ ಇಂದು ಅದ್ವೈತ ಸಾಮ್ರಾಟ ಜಗದ್ಗುರು ಶ್ರೀ ಸಿದ್ದಾರೂಢ ಮಹಾರಾಜರ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ಸಿದ್ದಾರೂಢರ ದರ್ಶನ ಪಡೆದು ಧನ್ಯತಾ ಭಾವ ಅನುಭವಿಸಿದರು.
ಸುಮಾರು 40 ವರ್ಷಗಳಿಂದಲೂ ಸಿದ್ದಾರೂಢರ ಜಾತ್ರೋತ್ಸವ ಪ್ರತಿವರ್ಷ ನಡೆಯುತ್ತಾ ಬಂದಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಬರುತ್ತಿದೆ. ಸಾಮೂಹಿಕ ವಿವಾಹದ ಜೊತೆಗೆ ಏಳು ದಿನಗಳ ವರೆಗೆ ಶ್ರೀ ಸಚ್ಚಿದಾನಂದ ಸ್ವಾಮಿಗಳು ಹಾಗೂ ಶ್ರೀ ಬಸವಾನಂದ ಸ್ವಾಮಿಗಳಿಂದ ಕೀರ್ತನೆ ನಡೆಯಿತು. ಬಳಿಕ ಅನ್ನ ಸಂತರ್ಪಣೆ ಜರುಗಿತು.
ಶ್ರೀ ಸಿದ್ದಾರೂಢರ ಗದ್ದುಗೆಗೆ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಹಣ್ಣು- ಕಾಯಿ ಮಾಡಿಸಿ, ಪ್ರಸಾದ ಸೇವಿಸುವುದರ ಮೂಲಕ ಸಿದ್ದಾರೂಢರ ಜಾತ್ರೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು.
ಮಹಾಂತೇಶ ಪಠಾಣಿ,
ʼಪಬ್ಲಿಕ್ ನೆಕ್ಸ್ಟ್ʼ ಅಳ್ನಾವರ
Kshetra Samachara
09/03/2022 10:06 pm