ನವಲಗುಂದ: ದೀಪಾವಳಿ ಬಳಿಕ ಬಲಿ ಪಾಡ್ಯಮಿ ನಿಮಿತ್ತ ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಕುರುಬರು ತಮ್ಮ ಕುರಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಲಕ್ಷ್ಮಿ ಪೂಜೆ ನೆರವೇರಿಸಿದರು.
ಗ್ರಾಮದ ಹೊಲದಲ್ಲಿ ಶೇಕಪ್ಪ ಶೆಟ್ಟನ್ನವರ, ಬೀರಪ್ಪ ದೊಡಮನಿ, ನಾಗಪ್ಪ ಗುಂಜಳ ಅವರು ತಮ್ಮ ಕುರಿಗಳಿಗೆ ಪೂಜೆ ಸಲ್ಲಿಸಿ, ದೇವಿಯ ಮೂರ್ತಿಯನ್ನಿಟ್ಟು ಗ್ರಾಮಸ್ಥರೆಲ್ಲರು ಕೂಡಿ ಪೂಜೆ ಸಲ್ಲಿಸಿ, ಸಂತಸಪಟ್ಟರು.
Kshetra Samachara
05/11/2021 06:28 pm