ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸಾಂತ್ಯದ ಅಂಗವಾಗಿ
ಶ್ರೀ ಅಂಕಲಗಿ ಅಡವಿ ಸಿದ್ಧೇಶ್ವರ ಹಾಗೂ ಈಶ್ವರ ಅಡ್ಡಪಲ್ಲಕ್ಕಿ ಉತ್ಸವ ಮಂಗಳವಾರ. ಜರುಗಿತು.
ಅಲಂಕೃತಗೊಂಡ ಎರಡು ದೇವಸ್ಥಾನಗಳ ಅಡ್ಡಪಲ್ಲಕ್ಕಿ ಗ್ರಾಮದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದವು. ಪೂಜೆ ಸಲ್ಲಿಸುವ ಮೂಲಕ ಭಕ್ತರು ಅಡ್ಡಪಲ್ಲಕ್ಕಿಯನ್ನು ಬರಮಾಡಿಕೊಂಡರು. ಪಲ್ಲಕ್ಕಿ ಸಂಚರಿಸುವ ಮಾರ್ಗಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಎರಡು ದೇವಸ್ಥಾನದಲ್ಲಿ ಒಂದು ತಿಂಗಳಾದ್ಯಂತ ಭಜನೆ, ಪೂಜೆ ಆಯೋಜಿಸಲಾಗಿತ್ತು.
Kshetra Samachara
07/09/2021 07:00 pm