ಕಲಘಟಗಿ: ಪಟ್ಟಣದಲ್ಲಿ ಶ್ರೀ ನಾಮದೇವ ಮಹಾರಾಜರ ೬೭೧ ನೇ ಸಮಾಧಿ ಸಂಜೀವಿನಿ ಸೋಹಾಳ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಾಮದೇವ ಸಿಂಪಿ ಸಮಾಜದಿಂದ ಶ್ರೀ ನಾಮದೇವ ಮಹಾರಾಜರ ಭಾವಚಿತ್ರದ ಮೆರವಣಿಗೆಯನ್ನು ಮಂಗಲವಾಧ್ಯಗಳೊಂದಿಗೆ ನೆರವೇರಿಸಲಾಯಿತು.
ನಾಮದೇವ ಹರಿಮಂದಿರದಲ್ಲಿ ವಿಠಲ ರುಕ್ಮಿಣಿ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣದಲ್ಲಿ ಶ್ರೀ ನಾಮದೇವ ಮಹಾರಾಜರ ಭಾವಚಿತ್ರದ ಮೆರವಣಿಯನ್ನು ಭಜನೆ ಮಾಡುವ ಮೂಲಕ ನೆರವೇರಿಸಲಾಯಿತು.ಸಿಂಪಿ ಸಮಾಜ ಬಾಂಧವರು ಹಾಗೂ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
Kshetra Samachara
06/08/2021 10:56 pm