ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ :ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಯಿಂದ ಸನ್ಮಾನ

ನವಲಗುಂದ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯ ಮಟ್ಟದ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ ಪಡೆದಿರುವಂತಹ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆ ನಂ-1 ರ ಶಿಕ್ಷಕರಾದ ವೇದಾವತಿ ದಂಡಿಗೆದಾಸರ ಅವರಿಗೆ ನಗರದ ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಸನ್ಮಾನ ಮಾಡಿ, ಸಿಹಿ ತಿನ್ನಿಸಿದರು.

ನಾನು ಈ ಮಟ್ಟಕ್ಕೆ ಬರಲು ಶಿಕ್ಷಕರು ಕೊಟ್ಟಂತಹ ವಿದ್ಯೆಯೇ ಕಾರಣ, ಪ್ರಾಥಮಿಕ ಶಾಲೆಯಲ್ಲಿ ಬುನಾದಿ ಹಾಕಿದ ಶಿಕ್ಷಕರನ್ನು ಜೀವನದಲ್ಲಿ ಎಂದು ಮರೆಯಲಿಕ್ಕೆ ಸಾಧ್ಯವಿಲ್ಲಾ, ಏಳು ಜನ್ಮವನ್ನು ಎತ್ತಿ ಬಂದರೂ ಸಹ ಶಿಕ್ಷಕರ ವೃಣವನ್ನು ತೀರಿಸಲು ಸಾಧ್ಯವಿಲ್ಲವೆಂದು ಮಾಬುಸಾಬ ಯರಗುಪ್ಪಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಎಸ್. ಎಸ್ ಹಂಡಗಿ, ಸಹ ಶಿಕ್ಷಕರಾದ ಶ್ರೀನಿವಾಸ ನವೀಂದ್ರಕರ, ಎಚ್ ಎಚ್ ಬೈರೆಕದಾರ, ಎನ್ ಎನ್ ಹಾಲಿಗೇರಿ, ಎಸ್ ಎಮ್ ಬೆಂಚಿಕೇರಿ, ಎಸ್. ಸಿ ಹೊಳೆಯಣ್ಣವರ, ಬಿ. ಬಿ ಅಂಗಡಿ, ಎಸ್. ಬಿ ಭಜಂತ್ರಿ, ಆರ್. ಎನ್ ಹಾಲಿಗೆರಿ, ಶ್ರೀನಿವಾಸ್ ಅಮಾತ್ಯನವರ, ಎಮ್. ಎಚ್ ಚಿಕನಾಳ, ಆರ್. ಎನ್ ಶಿಕ್ಷಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/01/2022 03:14 pm

Cinque Terre

12.2 K

Cinque Terre

0

ಸಂಬಂಧಿತ ಸುದ್ದಿ